ಬೆಳ್ತಂಗಡಿ: ಸಂತ ಲಾರೆನ್ಸ್ ಕೆಥೆಡ್ರಲ್‌ನಲ್ಲಿ ಶುಭ ಶುಕ್ರವಾರ ಆಚರಣೆ

0

ಬೆಳ್ತಂಗಡಿ: ಲೋಕದ ಪಾಪಗಳಿಗಾಗಿ ಶಿಲುಬೆಗೇರಿದ ಯೇಸು ಕ್ರಿಸ್ತರ ಪ್ರೀತಿ ಮತ್ತು ಪರಮ ತ್ಯಾಗದ ಸ್ಮರಣೆಯ ಅಂಗವಾಗಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಸಂತ ಲಾರೆನ್ಸರ ಕೆಥೆಡ್ರಲ್‌ನಲ್ಲಿ ‘ಶುಭ ಶುಕ್ರವಾರ’ವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

ಧರ್ಮಪ್ರಾಂತ್ಯದ ಬಿಷಪ್ ಡಾ. ಜೇಮ್ಸ್ ಪಟ್ಟೇರಿಲ್ ಅವರು ಪವಿತ್ರ ವಿಧಿವಿಧಾನಗಳ ನೇತೃತ್ವ ವಹಿಸಿ ಸಂದೇಶ ನೀಡಿದರು. “ಯೇಸು ಕ್ರಿಸ್ತರು ನಮಗೆ ಕಲಿಸಿಕೊಟ್ಟ ಪ್ರೀತಿ, ತ್ಯಾಗ ಮತ್ತು ಕ್ಷಮೆಯ ಗುಣಗಳನ್ನು ನಾವು ಜೀವನದಲ್ಲಿ ಆಳವಾಗಿ ಧ್ಯಾನಿಸಬೇಕು. ಆ ಮೌಲ್ಯಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಕ್ರಿಸ್ತ ಜಯಂತಿ ಸಾರ್ಥಕವಾಗುತ್ತದೆ,” ಎಂದು ಅವರು ಭಕ್ತಾದಿಗಳಿಗೆ ಕರೆ ನೀಡಿದರು.

ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಮಾಣಿ, ಫಾ. ಕುರಿಯಾಕೋಸ್, ಫಾ. ಲಾರೆನ್ಸ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here