ಮಡಂತ್ಯಾರು: ವಾತ್ಸಲ್ಯ ಕುಟುಂಬದ ಸದಸ್ಯರಿಗೆ ಹಣ್ಣು-ಹಂಪಲು ವಿತರಣೆ

0

ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಡಂತ್ಯಾರು ವಲಯದ ವತಿಯಿಂದ ಹೇಮಾವತಿ ಅವರ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ‘ವಾತ್ಸಲ್ಯ’ ಕುಟುಂಬದ ಸದಸ್ಯರಿಗೆ ಹಣ್ಣು-ಹಂಪಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಡಂತ್ಯಾರು ವಲಯ ಮೇಲ್ವಿಚಾರಕರಾದ ಕೇಶವ ಕೆ ಅವರು, ಅಮ್ಮನವರ ಜನ್ಮದಿನದ ನೆನಪಿಗಾಗಿ ಸಮಾಜದ ವಿಶೇಷ ಕಾಳಜಿ ಅಗತ್ಯವಿರುವ ಕುಟುಂಬಗಳಿಗೆ ಸಿಹಿ ಹಾಗೂ ಹಣ್ಣುಗಳನ್ನು ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಉಮೇಶ್, ಒಕ್ಕೂಟದ ಪದಾಧಿಕಾರಿಗಳಾದ ವೆಂಕಟೇಶ್ ಹೆಗ್ಡೆ, ಯೋಗೀಶ್, ಶ್ವೇತಾ ಹಾಗೂ ಸೇವಾ ಪ್ರತಿನಿಧಿಗಳಾದ ಭಾರತಿ ಮತ್ತು ಜಯಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here