







ಬೆಳ್ತಂಗಡಿ: ತಾಲೂಕಿನ ನಾವರದ ‘ಶ್ರೀ ಕ್ಷೇತ್ರ ಗೆಜ್ಜೆಗಿರಿ ಬಯಲಾಟ ಸಮಿತಿ’ಯ ಉದ್ಘಾಟನಾ ಸಮಾರಂಭ ಹಾಗೂ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆಯನ್ನು ಮಾ.31ರಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಬಿಡುಗಡೆ ಮಾಡಲಾಯಿತು.ಬಡಗನ್ನೂರು ಪುತ್ತೂರಿನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ‘ಶ್ರೀ ಆದಿ ಧೂಮಾವತಿ ಶ್ರೀದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ’ಯ ವತಿಯಿಂದ ಪ್ರದರ್ಶನಗೊಳ್ಳಲಿರುವ ‘ನಾಗರತಿ’ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆಯನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.


ಕಾರ್ಯಕ್ರಮದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಮತ್ತು ಶ್ರೀ ಜಯಂತ ನಡುಬೈಲು, ಕ್ಷೇತ್ರದ ಯಜಮಾನ ಶ್ರೀಧರ ಪೂಜಾರಿ, ಟ್ರಸ್ಟ್ ಅಧ್ಯಕ್ಷ ಸಂಜೀವ ಪೂಜಾರಿ ಬಿರುವ ಹಾಗೂ ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು. ಆಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ., ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು ಹಾಗೂ ಸಮಿತಿಯ ಸದಸ್ಯರುಗಳಾದ ನಿತ್ಯಾನಂದ ನಾವರ, ಶ್ರೀ ನಾರಾಯಣ ಮಚ್ಚಿನ, ಶ್ರೀ ರಾಜೇಂದ್ರ ಚಿಲಿಂಬಿ, ನಾರಾಯಣ ಮಂಡ್ಯಂಗಳ, ನಿತೀಶ್ ಶಾಂತಿವನ, ಜಯರಾಮ ಬಂಗೇರ ಹೇರಾಜೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭ ಹಾರೈಸಿದರು.









