







ಬಳಂಜ. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾರ ನಿಧಿಯಿಂದ ಬಳಂಜ, ಸುದೆಗಂಡಿ ಪೆರೋಡಿತ್ತಾಯಕಟ್ಟೆ ಸಂಪರ್ಕ ರಸ್ತೆಯ ಮುಂದುವರಿದ ಕಾಂಕ್ರೀಟ್ ಕಾಮಗಾರಿಗೆ 1 ಕೋಟಿ ರೂಪಾಯಿ ಅನುದಾನ ಹಾಗೂ ಬಳಂಜ ಆನೆಪಿಲ ರಸ್ತೆಗೆ 50 ಲಕ್ಷ,ಅಟ್ಲಾಜೆ ಬದಿನಡೆ ರಸ್ತೆಗೆ 50 ಲಕ್ಷ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ.


ಇದಲ್ಲದೆ ಬಳಂಜ ಶಾಲಾ ಕ್ರೀಡಾಂಗಣದ ರಂಗಮಂದಿರ ನಿರ್ಮಾಣಕ್ಕೆ 5ಲಕ್ಷ ಹಾಗೂ ಬಲಂಜ ದೇವಸ್ಥಾನದ ರಸ್ತೆ ಡಾಮರೀಕರಣಕ್ಕೆ 5ಲಕ್ಷ ಮಾನ್ಯ ಶಾಸಕರು ಮೀಸಲಿಟ್ಟದ್ದಾರೆ ಎಂದು ತಿಳಿದು ಬಂದಿದೆ.









