







ಕುವೆಟ್ಟು: ಶ್ರೀರಾಮ ಸೇವಾ ಸಮಿತಿ (ರಿ) ಮದ್ದಡ್ಕ ವಿಶ್ವ ಹಿಂದೂ ಪರಿಷತ್ ಭಜರಂಗದಳ ಮದಡ್ಕ ಶಾಖೆ ಇದರ ಜಂಟಿ ಆಶ್ರಯದಲ್ಲಿ ಜರಗುವ 6ನೇ ವರ್ಷದ ಶ್ರೀ ರಾಮನವಮಿ ಉತ್ಸವದ ಪ್ರಯುಕ್ತ ಮಾ 26 ರoದು ಸೂರ್ಯೋದಯದಿಂದ ಸೂರ್ಯಾಸ್ಥಮಾನದರೇಗೆ ನಡೆಯುವ ಭಜನಾ ಕಾರ್ಯಕ್ರಮಕ್ಕೆ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಎಂ ರಘುರಾಮ್ ಭಟ್ ಮಠ ಭಜನಾ ಮಂದಿರದಲ್ಲಿ ವೈದಿಕ ವಿಧಿ ವಿಧಾನಗಳನ್ನು ನೆರವೇರಿಸಿ ಭಜನಾ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿದರು.


ಅತಿಥಿಗಳಾಗಿ ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ಮನೋಹರ ಕೇದಳಿಕೆ, ಕಾರ್ಯದರ್ಶಿ ಪ್ರೀತಂ ಆಚಾರ್ಯ, ವಿಶ್ವ ಹಿಂದೂ ಪರಿಷತ್ ಮದ್ದಡ್ಕ ಇದರ ಕಾರ್ಯದರ್ಶಿ ವಿನೋದ್ ಶೆಣೈ, ಭಜರಂಗದಳ ಮದ್ದಡ್ಕ ಘಟಕದ ಸಂಚಾಲಕ ಯಶೋಧರ ಶೆಟ್ಟಿ ಅರ್ಕಜೆ, ಮದ್ದಡ್ಕ ಶ್ರೀ ರಕ್ತೇಶ್ವರಿ ಮತ್ತು ಪಿಲಿಚಾಮುಂಡಿ ದೈವಸ್ಥಾನದ ಸೇವಾ ಟ್ರಸ್ಟ್ ನ ಕೋಶಾಧಿಕಾರಿ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಹಾಗೂ ಭಜನಾ ಮಂದಿರದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು









