ದ. ಕ ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ :ಡಾ. ರವೀಶ್ ಪಡುಮಲೆಗೆ ಕನ್ನಡ ಸಿರಿ ಪ್ರಶಸ್ತಿ

0

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆಯುತ್ತಿರುವ ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನವು ಇದೇ ಮಾರ್ಚ್ 26ನೇ ಗುರುವಾರದಿಂದ 28ನೇ ಶನಿವಾರದವರೆಗೆ ಸ್ಪರ್ಶ ಕಲಮಂದಿರ ಬಿಸಿ ರೋಡ್, ಬಂಟ್ವಾಳದಲ್ಲಿ ನಡೆಯಲಿರುವುದು.

ಈ ಸಮ್ಮೇಳನದಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿ, ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಸಾಧಕರಿಗೆ ನೀಡುವ ವಿವಿಧ ಪ್ರಶಸ್ತಿಗಳ ಪೈಕಿ ಕನ್ನಡ ಸಿರಿ ಪ್ರಶಸ್ತಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಮತ್ತು ದೈವ ಚಾಕಿರಿ ಮಾಡುವ ವಾಗ್ಮಿ ಡಾ. ರವೀಶ್ ಪಡುಮಲೆಯವರು ಆಯ್ಕೆಯಾಗಿದ್ದಾರೆ.

ಇವರೊಂದಿಗೆ ಸಾಹಿತಿಗಳಾದ ಪದ್ಮನಾಭ ಭಟ್, ಸದಾನಂದ ನಾರಾವಿ, ವಾಸ್ತು ತಜ್ಞ ರಾಜರಾಮ ಶರ್ಮ ಬೆಳಾಲು ಹಾಗೂ ಇನ್ನಿತರ ಸಾಧಕರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here