






ಧರ್ಮಸ್ಥಳ : ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ನಿತ್ಯಾನಂದ ನಗರದಲ್ಲಿ ಜಗದ್ಗುರು ಶ್ರೀ ಅತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸ್ಮರಣೆಯೊಂದಿಗೆ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ 66 ನೇ ವರ್ಷದ ಶ್ರೀ ರಾಮ ನಾಮ ಸಪ್ತಾಹ ಮತ್ತು ಪ್ರತಿಷ್ಠಾ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.24 ರಂದು ನವದುರ್ಗಾ ಹೋಮ, ನವ ದುರ್ಗೆಯರಿಗೆ ವಿಶೇಷ ಅಲಂಕಾರ ಪೂಜೆ ನಡೆಯಿತು.


ಶ್ರೀ ಗುರುದೇವ ಮಠ ಟ್ರಷ್ಟಿ ಸುಜೀತಾ ವಿ. ಬಂಗೇರ, ಟ್ರಷ್ಟಿ ತುಕಾರಾಮ ಸಾಲಿಯಾನ್ ಆರ್ಲ, ಕೃಷ್ಣಪ್ಪ ಗುಡಿಗಾರ, ಶ್ರೀ ರಾಮ ಕ್ಷೇತ್ರ ಮಹಿಳಾ ಸಮಿತಿ ಸಂಚಾಲಕಿ ಸುಜಾತಾ ಅಣ್ಣಿ ಪೂಜಾರಿ, ಅಣ್ಣಿ ಪೂಜಾರಿ, ಇತರ ಗಣ್ಯರು, ಭಕ್ತರು ಉಪಸ್ಥಿತರಿದ್ದರು.









