ಕಲ್ಮಂಜ ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟ ವತಿಯಿಂದ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿಯಂತ್ರಣದ ಬಗ್ಗೆ ಮಾಹಿತಿ ಕಾರ್ಯಕ್ರಮ

0

ಕಲ್ಮಂಜ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸಾಯತ್ತ) ಉಜಿರೆ ಇದರ ಸಮಾಜ ಕಾರ್ಯ ವಿಭಾಗ ಮತ್ತು ಕಲ್ಮಂಜ ಗ್ರಾಮ ಪಂಚಾಯತ್ ಹಾಗೂ ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟ ಕಲ್ಮಂಜ ಇವರ ಸಹಯೋಗದಲ್ಲಿ ,ಮಹಿಳೆಯರಿಗೆ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿಯಂತ್ರಣದ ಬಗ್ಗೆ ಮಾಹಿತಿ ಕಾರ್ಯಕ್ರಮವು ಮಾ 20 ಗುರುವಾರದಂದು ನಡೆಯಿತು.

ಜಯಾನಂದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ,ಕಾರ್ಯಕ್ರಮದ ಮೌಲ್ಯ ,ಉಪಯೋಗ ಹಾಗೂ ಇದು ನಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದರು .ಹಾಗೂ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಇವರು ಸಮಾಜ ಕಾರ್ಯ ವಿಭಾಗದ ಮಕ್ಕಳ ಸಮುದಾಯ ಭಾಗವಹಿಸುವಿಕೆ ಹಾಗೂ ಕಾರ್ಯಕ್ರಮ ಆಯೋಜನೆಯ ಬಗ್ಗೆ ಅಭಿನಂದಿಸಿದರು , ಅದೇ ರೀತಿ ಸಮಾಜ ಕಾರ್ಯವಿಭಾಗದ ವಿದ್ಯಾರ್ಥಿಗಳು ಆಯೋಜಿಸುವ ಮುಂಬರುವ ಕಾರ್ಯಕ್ರಮಗಳಿಗೆ ಬೆಂಬಲ ನೀಡುವುದಾಗಿಯೂ ತಿಳಿಸಿದರು .

ಒಂದು ಮಾಹಿತಿ ಕಾರ್ಯಕ್ರಮವು ಇತ್ತೀಚಿನ ದಿನಗಳಲ್ಲಿ ಬಹಳ ಮುಖ್ಯವಾದದ್ದಾಗಿದೆ, ಆದುದರಿಂದ ಪ್ರತಿಯೊಬ್ಬರು ಈ ಮಾಹಿತಿ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಿ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರುಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಉಷಾ ಡಿಸೋಜಾ ಇವರು ಕಾರ್ಯಕ್ರಮದ ಬಗ್ಗೆ ಮಾತನಾಡಿ, ಇದೊಂದು ಬಹಳ ಉಪಯುಕ್ತವಾದಂತಹ ಕಾರ್ಯಕ್ರಮವಾಗಿದೆ ,ಇದರಿಂದ ಪ್ರತಿಯೊಬ್ಬರಿಗೂ ಪೂರಕ ಮಾಹಿತಿ ಒದಗಿ ಸಹಾಯವಾಗಲಿ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಕೀರ್ತನ ಆನಂದ್ ಇವರು ಮಾನಸಿಕ ಆರೋಗ್ಯ ಮತ್ತು ಒತ್ತಡ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು. ಇದರಲ್ಲಿ ಮನಶಾಸ್ತ್ರ ಎಂದರೇನು,ಮಾನಸಿಕ ಆರೋಗ್ಯದ ಮಹತ್ವ ,ಒತ್ತಡವನ್ನು ಹೇಗೆ ನಿಭಾಯಿಸಬೇಕು ಹಾಗೆ ಒತ್ತಡ ಕಡಿಮೆ ಮಾಡಲು ಆರೋಗ್ಯಕರ ಅಭ್ಯಾಸಗಳು ,ಯೋಗ , ಒಳ್ಳೆಯ ವಾತಾವರಣ ಬಹುಮುಖ್ಯ ಎಂದು ತಿಳಿಸಿದರು .

ಅದೇ ರೀತಿ ದಿನನಿತ್ಯದ ಜೀವನದ ಸವಾಲುಗಳನ್ನು ಮಹಿಳೆಯರು ಹೇಗೆ ಎದುರಿಸಬೇಕು ,ಉತ್ತಮ ಮಾನಸಿಕ ಆರೋಗ್ಯ ಹಾಗೂ ಒತ್ತಡ ನಿಯಂತ್ರಿಸಲು ಹಲವಾರು ವಿಧಾನಗಳನ್ನು ವಿವರಿಸಿದರು ಅದೇ ರೀತಿ ತಮ್ಮ ಒತ್ತಡ ಕೌಟುಂಬಿಕ ಕಲಹಕ್ಕೆ ಕಾರಣವಾಗಿ ಇದು ತಮ್ಮ ಮಕ್ಕಳ ಮೇಲೆ ಬೀರುವ ಪರಿಣಾಮಗಳನ್ನು ಕೂಡ ತಿಳಿಸಿಕೊಟ್ಟರು . ಹಾಗೆ ಕೆಲವೊಂದು ನೈಜ್ಯ ಉದಾಹರಣೆಗಳನ್ನು ನೀಡಿ ಮಹಿಳೆಯರಲ್ಲಿ ಮಾನಸಿಕ ಆರೋಗ್ಯ ಮತ್ತು ಒತ್ತಡ ನಿಯಂತ್ರಣದ ಬಗ್ಗೆ ಪೂರಕ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸ್ಕಂದ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರು ,ಕಾರ್ಯದರ್ಶಿಗಳು ಬೆಳ್ತಂಗಡಿ ವಲಯ ಮೇಲ್ವಿಚಾರಕ ಜಯಾನಂದ್ ಉಪಸ್ಥಿತರಿದ್ದರು . ಕಾರ್ಯಕ್ರಮದ ಸಂಯೋಜಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿ ಕೆ.ಎಸ್ ಭಾರ್ಗವಿ ಹಾಗೂ ರಕ್ಷಿತಾ ಜಿ.ಕೆ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು , ಕಂದ ಸಂಜೀವಿನಿ ಮಹಿಳಾ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರರಾದ ಪೂಜಾ ಇವರು ಸ್ವಾಗತಿಸಿ ,ಚರಣ್ ಕೆ ಧನ್ಯವಾದ ನೆರವೇರಿಸಿದರು. ಹಾಗೂ ಲೀಲಾದರ್ ಸಂಪನ್ಮೂಲ ವ್ಯಕ್ತಿಗಳ ಕಿರುಪರಿಚಯವನ್ನು ತಿಳಿಸಿದರು

LEAVE A REPLY

Please enter your comment!
Please enter your name here