







ಬಳ್ಳಮಂಜ: ಇತಿಹಾಸ ಪ್ರಸಿದ್ಧ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಾ. 29ರಿಂದ ಎ. 6ರವರೆಗೆಬ್ರಹ್ಮಕಲಶೋತ್ಸವ ನಡೆಯಲಿದ್ದು.ಆ ಪ್ರಯುಕ್ತ ಮಾ. 22ರಂದುಬಳ್ಳಮಂಜ ಪೇಟೆ, ಮಡಂತ್ಯಾರು ಪೇಟೆಯಿಂದ ತಣ್ಣೀರುಪಂತದವರೆಗೆ ಮಾಗಣೆಯ ಬೀದಿ ಬೀದಿಗಳಲ್ಲಿಯೂ ಸ್ವಚ್ಛತಾ ಕಾರ್ಯಕ್ರಮಸ್ವಚ್ಛತಾ ಸಂಕಲ್ಪನಂತರ ಏಕಕಾಲದಲ್ಲಿ ಸ್ವಚ್ಛತೆ ನಡೆಸಲಾಯಿತು.

ಬ್ರಹ್ಮಕಲಶೋತ್ಸವದ ಸಡಗರದಲ್ಲಿ ಸ್ವಚ್ಛತಾ ಧೈಯದೊಂದಿಗೆ ಬೀದಿ ಬೀದಿಗಳಲ್ಲಿ ಅಲ್ಲಲ್ಲಿ ಎಸೆದಿರುವ ಪ್ಲಾಸ್ಟಿಕ್ ಕಸಗಳು, ಗೋಣಿಚೀಲಗಳು ಮತ್ತು ತ್ಯಾಜ್ಯ ವಸ್ತುಗಳನ್ನು ತೆರವುಗೊಳಿಸಿ, ತೋರಣಗಳಿಂದ ಅಲಂಕಾರಗೊಳಿಸುವ ಈ ಪುಣ್ಯ ಕಾರ್ಯಕ್ರಮದೊಂದಿಗೆ ಮುಂದಿನ ದಿನಗಳಲ್ಲಿಯ ಶಾಶ್ವತವಾಗಿ ಸ್ವಚ್ಛತೆಯನ್ನು ಕಾಪಾಡುವ ಸಂಕಲ್ಪದೊಂದಿಗೆ ಶ್ರಮದಾನದ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ 8 ಮಾಗಣೆಯ ಪ್ರತಿ ಮನೆಯ ಕನಿಷ್ಠ ಒಬ್ಬ ಸದಸ್ಯರು ಭಾಗವಹಿಸಿ ಸ್ವಚ್ಛತೆಯಲ್ಲಿ ಸುಮಾರು 800ಜನ ಭಾಗವಹಿಸಿದ್ದರು.



ಮದ್ಯಾಹ್ನ ದೇವಸ್ಥಾನ ದಲ್ಲಿ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಾಸಕ ಹರೀಶ್ ಪೂಂಜಾ ಸಭಾಧ್ಯಕ್ಷತೆ ವಹಿಸಿದ್ದರು.

ಅನುವಂಶಿಕ ಆಡಳಿಕ ಮೊಕ್ತೇಸರ ಡಾ| ಹರ್ಷ ಸಂಪಿಗೆತ್ತಾಯ,ಬ್ರಹ್ಮ ಕಲಶ ಅಧ್ಯಕ್ಷ ವಸಂತ ಮರಕಡ, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಂಪತ್ ಬಿ. ಸುವರ್ಣಗೌರವ ಉಪಸ್ಥಿತರಿದ್ದರು.

ಅಡಿಕೆ ವರ್ತಕರ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಯೂರು, ಎಸ್.ಕೆ.ಡಿ.ಆರ್.ಡಿ.ಪಿ. ಯೋಜನಾಧಿಕಾರಿ ಅಶೋಕ್ ಬಿ., ಮಡಂತ್ಯಾರು ಸುಚಿತ್ರ ಜ್ಯುವೆಲ್ಲರ್ ಮಾಲಕ ಶ್ರೀಧರ ಅಚಾರ್ಯ, ಮಾಜಿ ತಣ್ಣೀರುಪಂತ ಗ್ರಾ.ಪಂ. ಅಧ್ಯಕ್ಷ ಸದಾನಂದ ಶೆಟ್ಟಿ, ಮಡಪ್ಪಾಡಿ, ಪುಂಜಾಲಕಟ್ಟೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರ ನಾಗೇಶ್ ಪ್ರಭು, ಪಿಲಾತ್ತಬೆಟ್ಟು ವ್ಯ.ಸೇ.ಸ.ಸಂಘ ನಿವೃತ್ತ ಶಾಖಾ ಪ್ರಬಂಧಕ ಮಂಜಪ್ಪ ಮೂಲ್ಯ, ದುಗ್ಗಪ್ಪ ಗೌಡ, ಪ್ರಮೋದ್ ಕುಮಾರ್, ಸುಧೀರ್ ಕುಮಾರ್, ಚಂದ್ರಕಾಂತ ನಿಡ್ಡಜೆ ಮೊದಲಾದವರು ಉಪಸ್ಥಿತರಿದ್ದರು.











