ಯಕ್ಷಗಾನ ದಶವತಾರಿ ಸೂರಿಕುಮೇರು ಕೆ. ಗೋವಿಂದಭಟ್ ನಿಧನ

0

ಬೆಳ್ತಂಗಡಿ: ಧರ್ಮಸ್ಥಳ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಯಕ್ಷಗಾನ ರಂಗದ ಶ್ರೇಷ್ಠ ಕಲಾವಿದ, ನಾಟ್ಯ ಗುರು ಮತ್ತು ದಶಾವತಾರಿ ಎಂದೇ ಖ್ಯಾತರಾದ ಸೂರಿಕಮೇರಿ ಕೆ.ಗೋವಿಂದ ಭಟ್ ಅವರು ಮಾ.20 ರಂದು ನಿಧನರಾದರು.

ದಕ್ಷಿಣ ಕನ್ನಡದ ಬಂಟ್ವಾಳದವರಾದ ಇವರು ಸುಮಾರು 6 ದಶಕಗಳ ಕಾಲ ರಂಗಸ್ಥಳದಲ್ಲಿ ಸಕ್ರಿಯರಾಗಿದ್ದು, ತಮ್ಮ ಗಡುಸು ಕಂಠ, ಅದ್ಭುತ ಅರ್ಥಗಾರಿಕೆ ಮತ್ತು ಪಾತ್ರಾಭಿನಯದಿಂದ (ಕೌರವ, ಕರ್ಣ, ಇಂದ್ರಜಿತು) ಪ್ರಸಿದ್ಧರಾಗಿದ್ದರು. ಇವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಬೆಂಗಳೂರು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಹೆಚ್ ಗೇರುಕಟ್ಟೆ ಹಾಗೂ ಹಲವು ಯಕ್ಷಗಾನ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ

LEAVE A REPLY

Please enter your comment!
Please enter your name here