ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜ್ಯೋತಿ ಆಸ್ಪತ್ರೆಯಲ್ಲಿ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮ ಉತ್ತೇಜಿಸಲು ವಿಶೇಷ ಶಿಬಿರ

0

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಜ್ಯೋತಿ ಆಸ್ಪತ್ರೆಯಲ್ಲಿ ನಾರಿ ಸ್ವಾಸ್ಥ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು.

ಜ್ಯೋತಿ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗಿರುವ ಸಿಸ್ಟರ್ ಮೇರಿಟ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ ಸಲಹೆಗಾರರು ಹಾಗೂ ವಕೀಲ ಸಿಸ್ಟರ್ ಜ್ಯೋತಿಸ್ ಭಾಗವಹಿಸಿದ್ದರು. ದರ್ಶನಿಕ ಮತ್ತು ಪ್ರವರ್ತಕ ಡಾ. ಸಿಸ್ಟರ್ ಬೆಟ್ಟಿ ವರ್ಗಿಸ್ (ಡಾ. ಸಿಸ್ಟರ್ ಅನೂಜ) ಅವರಿಂದ ಮಹಿಳೆಯರಿಗಾಗಿ ವಿಶೇಷ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.

ವಿಶೇಷ ಅತಿಥಿಗಳಾದ ಹಿರಿಯ ಸಂಚಾರಿ ಪೊಲೀಸ್ ಅಧಿಕಾರಿ ಸವಿತಾ, ಕಾನ್ಸ್ಟೇಬಲ್ ಆಗಿರುವ ರೇಣುಕಾ ಹಾಗೂ ಹಲವು ವರ್ಷಗಳಿಂದ ಜ್ಯೋತಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಯ ಸಿಬ್ಬಂದಿ ರೇಣುಕಾರವರನ್ನು ಸನ್ಮಾನಿಸಲಾಯಿತು.

ನಿಯಮಿತ ಆರೋಗ್ಯ ತಪಾಸಣೆ ಮತ್ತು ಮಹಿಳೆಯರಲ್ಲಿ ರೋಗಗಳ ಆರಂಭಿಕ ಪತ್ತೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಈ ಶಿಬಿರ ಹೊಂದಿದ್ದು ಆರೋಗ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡಿತು ಮತ್ತು ಮಹಿಳೆಯರು ಸಕಾಲಿಕ ವೈದ್ಯಕೀಯ ಆರೋಗ್ಯವನ್ನು ಪಡೆಯುವಂತೆ ಪ್ರೋತ್ಸಾಹಿಸಲಾಯಿತು.

LEAVE A REPLY

Please enter your comment!
Please enter your name here