33 ನೇ ವರ್ಷದ ವೇಣೂರು ಪೆರ್ಮುಡ ಜೋಡುಕರೆ ಕಂಬಳ; ವಿಶೇಷ ಆಕರ್ಷಣೆಯಾಗಿ ಪಲ್ಗುಣಿ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ, ಗ್ರಾಮೀಣ ಖಾದ್ಯಗಳ ಆಹಾರ ಮೇಳ, ಅಪರೂಪದ ವಸ್ತು ಪ್ರದರ್ಶನ

0

ವೇಣೂರು: ಬೆಳ್ತಂಗಡಿಯಲ್ಲಿ ಮಾ.21 ರಂದು 33ನೇ ವರ್ಷದ ವೇಣೂರು-ಪೆರ್ಮುಡ ಜೋಡುಕರೆ ಕಂಬಳ ನಡೆಯಲಿದ್ದು, ಈಗಾಗಲೇ ತಯಾರಿಗಳು ಅಂತಿಮ ಹಂತದಲ್ಲಿದೆ.

ವಿಶೇಷ ಆಕರ್ಷಣೆಯಾಗಿ ಫಲ್ಗುಣಿ ನದಿಯಲ್ಲಿ ಬೋಟಿಂಗ್ ವ್ಯವಸ್ಥೆ, ಗ್ರಾಮೀಣ ಖಾದ್ಯಗಳ ಆಹಾರ ಮೇಳ ಮತ್ತು ಹಿಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಜನರು ಉಪಯೋಗಿಸುತ್ತಿದ್ದ ಅಪರೂಪದ ವಸ್ತುಗಳ ವಸ್ತು ಪ್ರದರ್ಶನ ನಡೆಯಲಿದೆ.

ಕಂಬಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ಕಂಬಳ ಕೂಟವನ್ನು ಯಶಸ್ವಿಗೊಳಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here