ಕಟ್ಟೆ ಬದ್ರಿಯಾ ಮಸ್ಜಿದ್ ನಲ್ಲಿ ಗ್ರ್ಯಾಂಡ್ ಇಫ್ತಾರ್ ಮೀಟ್ನವಾಝ್ ಕಟ್ಟೆ, ಹಾಜಿ ಶಮೀಮ್ ಯೂಸುಫ್, ಸಲೀಂ ಸೌದಿ ಅರೇಬಿಯಾ ನೇತೃತ್ವ

0

ಬೆಳ್ತಂಗಡಿ; ಪವಿತ್ರ ರಂಝಾನ್ ಮಾಸದಲ್ಲಿ ಉಪವಾಸ ವೃತದಾರಿಗಳಿಗೆ ಇಫ್ತಾರ್ ಏರ್ಪಡಿಸುವುದು ಪುಣ್ಯದಾಯಕವಾಗಿದ್ದು ಆ ಹಿನ್ನೆಲೆಯಲ್ಲಿ ಪೆರಾಲ್ದರಕಟ್ಟೆ ಬದ್ರಿಯಾ ಜುಮ್ಮಾ ಮಸ್ಜಿದ್ ನಲ್ಲಿ ಗ್ರ್ಯಾಂಡ್ ಇಫ್ತಾರ್ ಮೀಟ್ ನಡೆಯಿತು.ಮಸ್ಜಿದ್ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ನವಾಝ್ ಶರೀಫ್ ಕಟ್ಟೆ, ಯುವ ಉದ್ಯಮಿ ಹಾಗೂ ಕೊಡುಗೈ ದಾನಿ ಹಾಜಿ ಶಮೀಮ್ ಯೂಸುಫ್ ಮತ್ತು ಅನಿವಾಸಿ ಭಾರತೀಯ ಸಲೀಂ ಸೌದಿ ಅರೇಬಿಯಾ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಅತ್ಯಂತ ವ್ಯವಸ್ಥಿತವಾಗಿ ಹಾಗೂ ಮಾದರಿಯಾಗಿ ರೂಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಖಿಲ್‌ರ್ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸಮಿತಿ ಸದಸ್ಯ ಅಬ್ದುಲ್ ಕರೀಂ ಗೇರುಕಟ್ಟೆ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ, ಜಾಮಿಯಾ ಮಸ್ಜಿದ್ ಬೆಳ್ತಂಗಡಿ ಅಧ್ಯಕ್ಷ ಮುಹಮ್ಮದ್ ರಫಿ ಬೆಳ್ತಂಗಡಿ, ಪ್ರಮುಖರಾದ ಹನೀಫ್ ಪುಂಜಾಲಕಟ್ಟೆ, ರಿಯಾಝ್ ಬ್ರಿಗೇಡ್, ಸಲೀಂ ಗುರುವಾಯನಕೆರೆ, ಮುಸ್ತಫಾ ಜಿ.ಕೆರೆ, ಹಕೀಂ ಲಾಯಿಲ, ಸಿಯಾಬ್ ಲಾಯಿಲ, ನಿಸಾರ್ ಕುದ್ರಡ್ಕ, ಬಶೀರ್ ಬಂಗೇರಕಟ್ಟೆ, ಜಮೀಯತುಲ್ ಫಲಾಹ್ ಸದಸ್ಯ ಫಝಲ್ ರಹ್ಮಾನ್ ಉಜಿರೆ, ನಿಝಾಮ್ ಕಟ್ಟೆ, ರಫೀಕ್‌ ಕನ್ನಡಿಕಟ್ಟೆ, ಅಶ್ಪಾಕ್ ಪುಂಜಾಲಕಟ್ಟೆ, ಹನೀಫ್ ಸಂಜಯನಗರ ಮೊದಲಾದವರಲ್ಲದೆ ಜಮಾಅತ್ ನ ಎಲ್ಲಾ ಹಿರಿಯ ಕಿರಿಯರು ಭಾಗಿಯಾಗಿದ್ದರು.

ಧರ್ಮಗುರು ಶಂಶುದ್ದೀನ್ ದಾರಿಮಿ ದುಆ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಯಶಸ್ವಿಗಾಗಿ ಜಮಾಅತ್ ಕಮಿಟಿ ಕಾರ್ಯದರ್ಶಿ ಸ್ವಾದಿಕ್ ಕಟ್ಟೆ, ಬದ್ರಿಯಾ ಯಂಗ್ ಮೆನ್ಸ್ ಕಮಿಟಿ ಅಧ್ಯಕ್ಷ ರಿಯಾಝ್ ಕಟ್ಟೆ ಸಹಿತ ಅವರ ತಂಡದ ಎಲ್ಲಾ ಸದಸ್ಯರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here