ಬೆಳಾಲಿನಲ್ಲಿ ಯಕ್ಷಾಭಿಮಾನಿ ಬಳಗದಿಂದ ಕಟೀಲು ಮೇಳದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಬೆಳಾಲು : ಯಕ್ಷಾಭಿಮಾನಿ ಬಳಗ ಬೆಳಾಲು ಇದರ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ಮಾ. 15 ರಂದು ಬೆಳಾಲು ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.

ಬೆಳಿಗ್ಗೆ ಪಾರಲ ಮನೆಯಲ್ಲಿ ಕಟೀಲು ಮೇಳದ ದೇವಿಗೆ ಮಹಾ ಪೂಜೆ ನಡೆಯಿತು. ಸಂಜೆ ಭವ್ಯ ಮೆರವಣಿಗೆಯೊಂದಿಗೆ ಶಾಲಾ ಆಗಮಿಸಿ ನಂತರ ಯಕ್ಷಗಾನ ಪ್ರದರ್ಶನ ಗೊಂಡಿತು. ಎಲ್ಲರಿಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದ ಯಶಸ್ವಿಗೆ ಬೆಳಾಲು ಯಕ್ಷಭಿಮಾನಿ ಬಳಗದ ಸಂಘಟಕರು, ಸದಸ್ಯರು, ಊರವರು, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾವಗವಹಿಸಿ ಸಹಕರಿಸಿದರು.

LEAVE A REPLY

Please enter your comment!
Please enter your name here