ದಾಖಲೆಪತ್ರ ಇದ್ದ ಪರ್ಸ್ ಮರಳಿಸಿ ಕಳಕೊಂಡವರಿಗೆ ಸಹಾಯಿಯಾದ ರಿಕ್ಷಾ ಚಾಲಕ ಗಣೇಶ್

0

ಬೆಳ್ತಂಗಡಿ; ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯ ಬ್ಯಾಗ್ ಎಗರಿಸಿದ ಕಿರಾತಕನೊಬ್ಬ ಅದರಲ್ಲಿದ್ದ ಹಣವನ್ನೆಲ್ಲ ಕಸಿದುಕೊಂಡು ಪರ್ಸನ್ನು ಕಕ್ಕೇನ ಬಳಿ ಎಸೆದುಹೋದದ್ದನ್ನು ತನಗೆ ಸಿಕ್ಕಿದ ಕೂಡಲೇ ಅದರಲ್ಲಿದ್ದ ದಾಖಲೆ ಆಧರಿಸಿ ಅದನ್ನು ಕಕ್ಕಿಂಜೆಯ ಮಹಿಳೆಗೆ ಹಸ್ತಾಂತರಿಸಿ ಉಜಿರೆಯ ಆಟೋ ಚಾಲಕ ಗಣೇಶ್ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಯು.ಬಿ ಅಟೋ ಚಾಲಕ ಮಾಲಕರ ಸಂಘದ ಸದಸ್ಯರೂ ಆಗಿರುವರಾಮದರ್ಶನ ಆಟೋ ಚಾಲಕ ಗಣೇಶ್ ಅವರು ಕರ್ತವ್ಯದ ನಿಮಿತ್ತ ತೆರಳುತ್ತಿದ್ದಾಗ ಪರ್ಸ್ ಬಿದ್ದು ಸಿಕ್ಕಿತ್ತು. ಅದರಲ್ಲಿದ್ದ ದಾಖಲೆಗಳ ಆಧಾರದಲ್ಲಿ ಕರೆ ಮಾಡಿ, ಪರ್ಸ್ ಎಗರಿಸಲ್ಪಟ್ಟು ಸಮಸ್ಯೆಗೆ ಸಿಲುಕಿ ಉಜಿರೆಯಲ್ಲಿ ಪರಿತಪಿಸುತ್ತಿದ್ದ‌ ಕಕ್ಕಿಂಜೆಯ ಮಹಿಳೆಯನ್ನು ಸಂಪರ್ಕಿಸಿ ಅವರಿಗೆ ಪರ್ಸ್ ಮರಳಿಸಲಾಯಿತು. ಈ ವೇಳೆ ಮಾತನಾಡಿದ ಮಹಿಳೆ, ನನ್ನ ನಗದು ಕಳವಾಗಿದೆ. ನಾನು ಬಸ್ಸಿನಲ್ಲಿ‌ ಪ್ರಯಾಣಿಸುವ ವೇಳೆ ಕಿರಾತಕನೊಬ್ಬ ನನ್ನ ಪರ್ಸ್ ಕಸಿದುಕೊಂಡಿದ್ದಾನೆ.‌ ಇದನ್ನು‌ನಾನು ಬಸ್ಸು ನಿರ್ವಾಹಕರಲ್ಲಿ ತಿಳಿಸಿದರೂ ಅವರು ಸ್ಪಂದಿಸಲಿಲ್ಲ. ಬಳಿಕ ಉಜಿರೆಯ ಸಂಚಾರ ನಿಯಂತ್ರಕರ ಗಮನಕ್ಕೆ ತರಲಾಯಿತಾದರೂ ಅವರೂ ಸಕಾಲಿಕವಾಗಿ ಸ್ಪಂದಿಸಿಲ್ಲ.

ಕಳ್ಳ ಪರ್ಸನ್ನು ಕಕ್ಕೇನ ಬಳಿ ಎಸೆದಿರುವ ಸಾಧ್ಯತೆ ಇದೆ. ಇದೀಗ ಗಣೇಶ್ ಅವರು ಪರ್ಸ್ ತಂದೊಪ್ಪಿಸಿದ್ದಾರೆ. ಅದರಲ್ಲಿ‌ ನನ್ನ ಅಮೂಲ್ಯ ದಾಖಲೆಗಳಿದ್ದು ನನಗೆ ಬಹಳ ಸಯಾಯಿಯಾಯಿತು ಎಂದು ತಿಳಿಸಿದ್ದಾರೆ.ತಿಂಗಳ ಹಿಂದೆ ಪ್ರಯಾಣಿಕರನ್ನು ಬಸ್ಸಿನಿಂದ ಎಳೆದು ಹಾಕಿ ಹಲ್ಲೆಗೈದ ಪ್ರಕರಣ ನಡೆದಿತ್ತು;ಎರಡು ತಿಂಗಳ ಹಿಂದೆ ಬೆಳ್ತಂಗಡಿಯಿಂದ ಮಂಗಳೂರು ಹೋಗುವ ದಾರಿ ಮಧ್ಯೆ ಮದ್ದಡ್ಕ ಎಂಬಲ್ಲಿ ತಲುಪುವಾಗ, ಸರಕಾರಿ ಬಸ್ಸಿನಲ್ಲಿ ಅಸಭ್ಯ ಭಾಷೆಯಿಂದ ಮಾತನಾಡುತ್ತಿದ್ದ‌ ಇಬ್ಬರು ಪ್ರಯಾಣಿಕರನ್ನು ಪ್ರಶ್ನೆ ಮಾಡಿದ್ದ‌ ತಾಯಿ ಮಕ್ಕಳಿಬ್ಬರ ಮೇಲೆ ಗಂಭೀರ‌ ಹಲ್ಲೆ‌‌ ನಡೆದ ಪ್ರಕರಣ ನಡೆದಿತ್ತು.

ಈ ವೇಳೆ ಕೂಡ ಸರಕಾರಿ ಬಸ್ಸನ್ನು ಪೊಲೀಸ್ ಠಾಣೆಗೆ ಕರೆತರಬೇಕಾದ ಸಿಬ್ಬಂದಿಗಳು‌ ಮದ್ದಡ್ಕ ಪೇಟೆಗಿಂತ ಸ್ವಲ್ಪ ಎದುರು ಜನ ಓಡಾಟ ಇಲ್ಲದ ಕಡೆ ಬಸ್ಸು ನಿಲ್ಲಿಸಿದ್ದರಿಂದ ಹಲ್ಲೆಕೋರರು ಇಳಿದು ಪರಾರಿಯಾಗಿದ್ದರು. ಇಲ್ಲೂ ಕೂಡ ಇಲಾಖಾ ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆ ಜನರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.

LEAVE A REPLY

Please enter your comment!
Please enter your name here