







ಬೆಳ್ತಂಗಡಿ : ಮಾರ್ಚ್ 14ರಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕರ್ನಾಟಕ ಮಾಧ್ಯಮ ಅಕಾಡಮಿಯ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವಿಶೇಷ ವರದಿಗಾರರಾಗಿರುವ ಶ್ರೀನಿವಾಸ ಎಂ. ಸೇರಿದಂತೆ 6 ಪತ್ರಕರ್ತರು ಕರ್ನಾಟಕ ಮಾಧ್ಯಮ ಅಕಾಡಮಿ ಫೆಲೋಶಿಪ್ ಭಾಗವಾಗಿ ಸಿದ್ದಪಡಿಸಿರುವ ಸಂಶೋಧನಾ ವರದಿಗಳನ್ನು ಬಿಡುಗಡೆ ಮಾಡಿದರು.


ಕರ್ನಾಟಕ ಮಾಧ್ಯಮ ಅಕಾಡಮಿ ಅಧ್ಯಕ್ಷೆ ಆಯೇಶಾ ಖಾನಂ, ಕಾರ್ಯದರ್ಶಿ ಸಹನಾ ಎಂ., ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮೂಲತಃ ತಾಲೂಕಿನ ಕನ್ಯಾಡಿ II ನ ದಿ.ರಾಮ ಬಾಳ್ತಿಲ್ಲಾಯ ಹಾಗು ಸುನಂದಾ ದಂಪತಿ ಪುತ್ರರಾದ ಇವರು ಉಜಿರೆಯ ಶ್ರೀ ಧ.ಮ. ಕಾಲೇಜು ಹಾಗು ಮಂಗಳೂರು ವಿಶ್ವ ವಿದ್ಯಾನಿಲಯದ ಹಳೆ ವಿದ್ಯಾರ್ಥಿಯಾಗಿದ್ದು, ಪ್ರಸ್ತುತ ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.









