






ಕೊಯ್ಯೂರು :ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕೊಯ್ಯೂರು ಕಸಬಾ, ಮಲೆ ಬೆಟ್ಟು – ಇಲ್ಲಿ ಇತ್ತೀಚೆಗೆ ರಾಜ್ಯ ಸಭಾ ಸದಸ್ಯರಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಸುಮಾರು 2 ಲಕ್ಷ ಅನುದಾನದಲ್ಲಿ ಒದಗಿಸಲ್ಪಟ್ಟ ಸ್ಮಾರ್ಟ್ ಟಿ. ವಿ. ಶೈಕ್ಷಣಿಕ ಪರಿಕರಗಳ ಉದ್ಘಾಟನಾ ಸಮಾರಂಭವು ನಡೆಯಿತು.

ಉದ್ಘಾಟನೆಯನ್ನು ನೆರವೇರಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಲಾಯಿಲ ವಿಭಾಗದ ಮೇಲ್ವಿಚಾರಕ ಸುಶಾಂತ್ ಅವರು “ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸಿಕೊಳ್ಳಬೇಕು. ತಂತ್ರ ಜ್ಞಾನ ಆಧಾರಿತ ಇಂತಹ ವ್ಯವಸ್ಥೆಗಳ ಪ್ರಯೋಜನ ವನ್ನು ವಿದ್ಯಾರ್ಥಿಗಳು ಪಡೆದು ಕೊಳ್ಳಬೇಕು ” ಎಂದು ಕರೆ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಜಗನ್ನಾಥ್ ವಹಿಸಿ ಕೊಂಡಿದ್ದರು. ವೇದಿಕೆಯಲ್ಲಿ ಎಸ್ ಕೆ ಡಿ ಆರ್ ಡಿ ಪಿ ಸೇವಾ ಪ್ರತಿನಿಧಿ ಲೀಲಾ, ಅಮ್ಮಂದಿರ ಸಮಿತಿ ಉಪಾಧ್ಯಕ್ಷೆ ಮೋಹಿನಿ , ಎಸ್ ಡಿ ಎಂ ಸಿ ಹಿರಿಯ ಸದಸ್ಯ ಸಂಜೀವ ಮಲೆಕುಡಿಯ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಸಂತಿ ಕೆ ಎನ್. ಪ್ರಾಸ್ತವಿಕವಾಗಿ ಮಾತನಾಡುತ್ತಾ ಶಿಕ್ಷಣ ವ್ಯವಸ್ಥೆಯಲ್ಲಿ ಡಿಜಿಟಲೀಕರಣ ಮತ್ತು ಪರೀಕ್ಷಾ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಿ ಅತಿಥಿಗಳನ್ನು ಸ್ವಾಗತಿಸಿದರು.
ಇಕೋ ಕ್ಲಬ್ ಹಾಗೂ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜಿ. ಪಿ. ಟಿ. ಶಿಕ್ಷಕಿ ಬಿ.ಸುಶ್ಮಿತಾ ರಾವ್ ಕಾರ್ಯಕ್ರಮ ನಿರ್ವಹಿಸಿದರು.ಜಿ. ಪಿ. ಟಿ. ಶಿಕ್ಷಕಿ ದೇವಿ ಬಾಯಿ ಡಿ. ವಂದಿಸಿದರು. ಸಹಶಿಕ್ಷಕಿ ವಿಜಯಶ್ರೀ ಮತ್ತು ವೇದಾವತಿ ಮತ್ತು ಅಕ್ಷರ ದಾಸೋಹ ಸಿಬ್ಬಂದಿಗಳು ಮತ್ತು ಎಸ್ ಡಿ ಎಂ ಸಿ. ಸದಸ್ಯರು ಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.









