ಬೆಳಾಲಿನಲ್ಲಿ ಕೆ. ಸಿ. ಸುಪಾರಿ ಟ್ರೇಡರ್ಸ್ ಶುಭಾರಂಭ ಹರೀಶ್ ಆರಿಕೋಡಿ ಅವರಿಂದ ಉದ್ಘಾಟನೆ

0

ಬೆಳಾಲು : ಬೆಳಾಲಿನ ಸುಕೃತಂ ಕಾಂಪ್ಲೆಕ್ಸ್ ನಲ್ಲಿ ನೂತನ ಅಡಿಕೆ, ತೆಂಗಿನಕಾಯಿ, ಗೇರುಬೀಜ, ಕಾಳು ಮೆಣಸು ಇತ್ಯಾದಿ ಕಾಡು ಉತ್ಪತ್ತಿಗಳ ಖರೀದಿ ಮಳಿಗೆ ಕೆ. ಸಿ. ಸುಪಾರಿ ಟ್ರೇಡರ್ಸ್ ಮಾ. 12 ರಂದು ಶುಭಾರಂಭಗೊಂಡಿತು.

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಅರಿಕೋಡಿ ದೀಪ ಬೆಳಗಿಸಿ ಶುಭ ಹಾರೈಸಿದರು. ಕೊಯ್ಯೂರು ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಅಶೋಕ ಭಟ್ ವೈದಿಕ ವಿಧಿ ವಿಧಾನ ನೆರವೇರಿಸಿದರು.

ಅನಂತೋಡಿ ಶ್ರೀ ಅನಂತ ಪದ್ಮನಾಭಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ, ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ, ಶ್ರೀಧರ ಭಟ್ ಬಾಸಮೆ,ಬೆಳಾಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಲಕ್ಷ್ಮಣ ಗೌಡ, ಬೆಳಾಲು ಸಹಕಾರ ಸಂಘದ ಸಿಇಓ ನಾರಾಯಣ ಗೌಡ, ನಿರ್ದೇಶಕ ಶೇಖರ ಗೌಡ ಕೊಲ್ಲಿಮಾರು, ಸಿಬ್ಬಂದಿ ವಸಂತ ಬಜಕ್ಕಲ, ಕಟ್ಟಡದ ಮಾಲಾಕ ಕೇಶವ ಗೌಡ, ನಿವೃತ್ತ ಬ್ಯಾಂಕ್ ನೌಕರ ಪುಷ್ಪರಾಜ್ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.ಮಾಲಕ ತುಳಸಿಪ್ರಸಾದ್ ಬನಂದೂರು, ಲಿಂಗಪ್ಪ ಪೂಜಾರಿ ಬನಂದೂರು, ಸುಜಾತಾ ಲಿಂಗಪ್ಪ ಪೂಜಾರಿ,ಪ್ರವೀಣ್ ಕುಮಾರ್, ಪ್ರತೀಕ್ಷಾ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here