






ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ)ಬೆಳ್ತಂಗಡಿ ತಾಲೂಕು ವತಿಯಿಂದ ಪೂಜ್ಯ ಡಾ.ಶ್ರೀ ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ, ಹೇಮಾವತಿ ಅವರ ಪ್ರೀತಿಯ ಕನಸಿನ ಕಾರ್ಯಕ್ರಮವಾದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ವಲಯದ ವಾತ್ಸಲ್ಯ ಸದಸ್ಯರಾದ ಗೀತಾ ಅವರ ವಾತ್ಸಲ್ಯ ಮನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಹಸ್ತಾಂತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯ ಮೂಲಕ ಮಾಶಾಸನ ನೀಡುತ್ತಿರುವ ಸದಸ್ಯರ ಪರಿಸ್ಥಿತಿಯನ್ನು ಗಮನಿಸಿದ ಹೇಮಾವತಿ ಹೆಗ್ಗಡೆ ಅವರು ವಾತ್ಸಲ್ಯ ಮನೆ ನಿರ್ಮಿಸಿ ಅವರ ಬದುಕಿಗೆ ಬೆಳಕನ್ನು ನೀಡಿದ್ದು ಈಗಾಗಲೇ ಸುಮಾರು 800 ಮನೆಗಳ ಹಸ್ತಾಂತರವಾಗಿದ್ದು ಮನೆಯ ಪೂರ್ಣವಾದ ಮೂಲಭೂತ ಸೌಕರ್ಯ ಇಲ್ಲದೆ,ಆ ಮನೆಯಲ್ಲಿ ಜೀವನವನ್ನು ಕಳೆಯುತ್ತಿದ್ದ ಗೀತಾ ರವರ ಮನೆಯನ್ನು ಗುರುತಿಸಿ, ಸುಂದರವಾದ ಮನೆಯನ್ನು ಯೋಜನೆಯ ವತಿಯಿಂದ ನಿರ್ಮಿಸಿ ಸಂತೋಷದಿಂದ ಈ ಮನೆಯನ್ನು ಪ್ರಾದೇಶಿಕ ನಿರ್ದೇಶಕರಾದ ಆನಂದ ಸುವರ್ಣ ರವರು ಹಸ್ತಾಂತರಿಸಿ ಶುಭ ಹಾರೈಸಿದರು.



ದಕ್ಷಿಣ ಕನ್ನಡ 1ಜಿಲ್ಲೆಯ ನಿರ್ದೇಶಕ ದಿನೇಶ್ ಡಿ. ಕೇಂದ್ರ ಒಕ್ಕೂಟದ ಅಧ್ಯಕ್ಷ ಸೀತಾರಾಮ, ಜನಜಾಗೃತಿ ವಲಯ ಅಧ್ಯಕ್ಷ ಪುರುಷೋತ್ತಮ, ತಾಲೂಕು ಯೋಜನಾಧಿಕಾರಿ ಯಶೋಧರ, ಒಕ್ಕೂಟ ಅಧ್ಯಕ್ಷ ಚರಣ್, ದಯಾನಂದ, ಯಶೋದಾ, ಸೇವಾಪ್ರತಿನಿಧಿ ಜ್ಯೋತಿ, ಲೀಲಾ, ಸೌಮ್ಯ, ಗುಣವತಿ ಸುಮಲತಾ ಹಾಗೂ ಸ್ಥಳೀಯರು ಉಪಸ್ಥರಿದ್ದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ರವಿ ಸ್ವಾಗತಿಸಿ, ಜ್ಞಾನವಿಕಾಸ ಕಾರ್ಯಕ್ರಮದ ಸಮನ್ವಯಾಧಿಕಾರಿ ಮಧುರಾವಸಂತ್ ಧನ್ಯವಾದ ನೀಡಿದರು.









