






ಬೆಳ್ತಂಗಡಿ: ಕಾಶಿ ಬೆಟ್ಟು ಸಮೀಪ ಮಾರ್ಚ್ 11ರಂದು ಸಾಯಂಕಾಲ ಸಂಭವಿಸಿದ ಅಪಘಾತದಲ್ಲಿ ಮಹೀಂದ್ರಾ ಥಾರ್ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ಗೆ ಅಪ್ಪಳಿಸಿದ ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾದ ಘಟನೆ ಸಂಭವಿಸಿದೆ.



ಅಪ್ಪಳಿಸಿದ ರಭಸಕ್ಕೆ ಕಾರಿನ ಮುಂಭಾಗ ಭಾರೀ ಹಾನಿಗೊಳಗಾಗಿದ್ದು ವಾಹನ ಸಂಪೂರ್ಣ ಜಖಂಗೊಂಡಿದೆ. ಆದರೆ ಕಾರಿನಲ್ಲಿದ್ದ ಏರ್ಬ್ಯಾಗ್‌ಗಳು ಸಮಯಕ್ಕೆ ತೆರೆದ ಪರಿಣಾಮ ಒಳಗಿದ್ದ ಚಾಲಕ ಮತ್ತು ಸಹಪ್ರಯಾಣಿಕ ಪ್ರಾಣಾಪಾಯ ದಿಂದ ಪಾರಾಗಿದ್ದಾರೆ ಸ್ಥಳೀಯರು ತಕ್ಷಣ ಸಹಾಯಕ್ಕೆ ಧಾವಿಸಿ ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಾರು ಬೆಳ್ತಂಗಡಿಯಿಂದ ಉಜಿರೆ ಭಾಗಕ್ಕೆ ಚಲಿಸುತ್ತಿತ್ತು ಎಂದು ತಿಳಿದು ಬಂದಿದೆ









