ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಮಾವೇಶ; ಅತೀ ಹೆಚ್ಚು ಹಾಲು ಕೊಡುವ ತಾಲೂಕು ಬೆಳ್ತಂಗಡಿ:ರವಿರಾಜ್ ಹೆಗ್ಡೆ

0

ಬೆಳ್ತಂಗಡಿ : ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘ ಇದರ ಬೆಳ್ತಂಗಡಿ ತಾಲೂಕು ನೌಕರರ ಸಮಾವೇಶ ಕಾರ್ಯಕ್ರಮವು ಮಾ.10 ರಂದು ಬೆಳ್ತಂಗಡಿ ಗುರು ಸಾನಿಧ್ಯ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟನೆಯನ್ನು ಮಂಗಳೂರು ದ. ಕ ಹಾಲು ಉತ್ಪಾದಕರ ಒಕ್ಕೂಟ ಇದರ ಅಧ್ಯಕ್ಷ ರವಿರಾಜ್ ಹೆಗ್ಡೆ ನೆರವೇರಿಸಿದ ಬಳಿಕ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಇವರು ನಮ್ಮ ಒಕ್ಕೂಟದಲ್ಲಿ ಅತಿ ಹೆಚ್ಚು ಹಾಲು ಕೊಡುತ್ತಿರುವ ತಾಲೂಕು ಬೆಳ್ತಂಗಡಿ ತಾಲೂಕು ನಿಮ್ಮ ಪರಿಶ್ರಮದಿಂದ ನನ್ನ ಸಾಧನೆಯನ್ನು ಮಾಡಲಾಗಿದೆ ನೀವು ಇಟ್ಟಿರುವ ಪ್ರೀತಿ ವಿಶ್ವಾಸದಿಂದ ನನಗೆ ಅಧ್ಯಕ್ಷನಾಗಲು ಅವಕಾಶ ಸಿಕ್ಕಿದೆ. ಹಾಲಿನ ಉತ್ಪಾದನೆ ಒಳ್ಳೆಯದಾಗಬೇಕು, ಉತ್ಪಾದನೆ ಹೆಚ್ಚಾಗಿದೆ ಎಂದು ಹೇಳಲು ತುಂಬಾ ಹೆಮ್ಮೆಯಾಗುತ್ತಿದೆ ಎಂದರು, ನಿಮ್ಮ ಅನೇಕ ಬೇಡಿಕೆಗಳು ಇದೆ ಅದನ್ನು ಈಡೇರಿಸಲು ಪ್ರಯತ್ನಿಸುತ್ತೇನೆ ಎಂದರು.

ತಾಲೂಕು ಹಾಲು ಉತ್ಪಾದಕರ ಸಹಕಾರ ನೌಕರ ಸಂಘದ ಅಧ್ಯಕ್ಷ ಜಿ ಬಾಲಕೃಷ್ಣ ಮಡಂತ್ಯಾರು ಸಭಾಧ್ಯಕ್ಷತೆ ವಹಿಸಿದ್ದರು.ದ. ಕ ಸ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರು ಹೆಚ್ ಪ್ರಭಾಕರ್, ವಕೀಲ ಕೇಶವ ಗೌಡ ಪಿ, ದ. ಕ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕರು ರವಿರಾಜ್ ಉಡುಪ, ದ. ಕ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕರು ಡಿ. ಆರ್. ಸತೀಶ್ ರಾವ್, ಡಾ. ಗಣಪತಿ ಬಿ. ಎಮ್, ಸಹಾಯಕ ವ್ಯವಸ್ಥಾಪಕ ಪೂಜಾ ಎಮ್.ಜಿ, ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಸಂದೀಪ್, ಮಾಲತಿ ಪಿ, ರಾಜೇಶ್ ಶೆಟ್ಟಿ, ಕೋಶಾಧಿಕಾರಿ ವಿದ್ಯಾನಂದ ಉಪಸ್ತಿತರಿದ್ದರು.ಮೇಬಲ್ ಕ್ರಾಸ್ತ, ಶಿವರಾಮ್ ಶಿರ್ಲಾಲು ನಿರೂಪಿಸಿ, ಜಯರಾಜ್ ಪ್ರಸ್ತಾಪಿಸಿ, ಸ್ವಾಗತಿಸಿ, ಕಾರ್ಯದರ್ಶಿ ಭಾರತಿ ಕೆ ಪಿಲಿಗೂಡು ವರದಿ ವಾಚನ ಮಾಡಿ, ಗಂಡಿಬಾಗಿಲು ಕಾರ್ಯದರ್ಶಿ ಶೈಲಾ ವಂದಿಸಿದರು. ವಯೋ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.

2024 -25ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ 80% ಗಿಂತ ಹೆಚ್ಚು ಅಂಕ ಪಡೆದ ನೌಕರರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here