






ಬಳಂಜ. ನಾಲ್ಕೂರು ಗ್ರಾಮದ ಅರಹಂತಬೈಲು ಗುತ್ತು ಮನೆಯಲ್ಲಿ ಮಾರ್ಚ್ 5 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಿತು.
ಮೂಡಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು,ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಪದ್ಮ ಪ್ರಸಾದ್ ಅಜಿಲರವರು ಹಾಗೂ ವಿವಿಧ ಕ್ಷೇತ್ರದ ಗಣ್ಯರು,ಊರವರು ಉಪಸ್ಥಿತರಿದ್ದರು.


ನಿರಂತರ ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಪದ್ಮಾವತಿ ವಿಜಯ ಕುಮಾರ್ ದಂಪತಿಗಳು ಮತ್ತು ಮಕ್ಕಳು ಕೀರ್ತಿಶೇಷ ಜಿನರಾಜ್ ಜೈನ್ ದಂಪತಿಗಳ ಸಂಕಲ್ಪದಂತೆ ಯಕ್ಷಗಾನ ಸೇವೆಯನ್ನು ನಡೆಸಿಕೊಟ್ಟರು.
ಎರಡು ತಿಂಗಳ ಹಿಂದೆ ಇದೇ ಮನೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ ಯಕ್ಷಗಾನ ನಡೆದಿತ್ತು. ಆಗಮಿಸಿದ ಎಲ್ಲರನ್ನು ಪದ್ಮಾವತಿ ವಿಜಯಕುಮಾರ್ ದಂಪತಿಗಳು ಸ್ವಾಗತಿಸಿ ಅತಿಥ್ಯಗಳನ್ನು ನೀಡಿ ಸತ್ಕರಿಸಿದರು.









