ಉಜಿರೆ ಬ್ರಹ್ಮಕಲಶ; ಅನುಗ್ರಹ ವಿವಿದೋದ್ದೇಶ ಸಹಕಾರ ಸಂಘದಿಂದ ಹೊರಕಾಣಿಕೆ ಸಮರ್ಪಣೆ

0

ಉಜಿರೆ: ಮಾ.2 ರಂದು ಅನುಗ್ರಹ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ, ಉಜಿರೆ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ಕಾಲೇಜು ಮೈದಾನದಿಂದ ಭಕ್ತಿಭಾವಪೂರ್ವಕವಾಗಿ ಹೊರೆ ಕಾಣಿಕೆಯನ್ನು ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನ, ಉಜಿರೆಗೆ ಭವ್ಯ ಮೆರವಣಿಗೆಯೊಂದಿಗೆ ತರಲಾಯಿತು.

ದೇವಸ್ಥಾನದ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ, ವಿಜಯ ಗೋಪುರ ಲೋಕಾರ್ಪಣೆ ಹಾಗೂ ನೂತನ ಬ್ರಹ್ಮರಥ ಮತ್ತು ಪುಷ್ಪರಥ ಸಮರ್ಪಣೆ ಮಹೋತ್ಸವದ ಅಂಗವಾಗಿ ಸಂಘದ ವತಿಯಿಂದ ಈ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು.ಸುಮಾರು 1000 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಜನಾರ್ಧನ ದೇವಸ್ಥಾನವು ಭಕ್ತರ ಅಪಾರ ನಂಬಿಕೆ ಮತ್ತು ಭಕ್ತಿಭಾವದ ಪವಿತ್ರ ಕ್ಷೇತ್ರವಾಗಿದ್ದು, ಈ ಬಾರಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಮಹೋತ್ಸವವು ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಪಡೆದಿದೆ.

ಕೀರ್ತಿಶೇಷ ಶ್ರೀ ಯು. ವಿಜಯ ರಾಘವ ಪಡೆವೆ ಅವರ ಆಶೀರ್ವಾದದಿಂದ ಹಾಗೂ ಅನುವಂಶಿಕ ಆಡಳಿತ ಮಕ್ತೇಸರರಾದ ಶ್ರೀ ಶರತ್ ಕೃಷ್ಣ ಅವರ ನೇತೃತ್ವದಲ್ಲಿ ಈ ವೈಭವಮಯ ಕಾರ್ಯಕ್ರಮವು ಭಕ್ತರ ಸಹಭಾಗಿತ್ವದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ.ಸಂಘದ ವತಿಯಿಂದ ಸಮರ್ಪಿಸಲಾದ ಹೊರೆ ಕಾಣಿಕೆಯಲ್ಲಿ ವಿವಿಧ ಕೃಷಿ ಉತ್ಪನ್ನಗಳು, ಹಸಿರು ತರಕಾರಿಗಳು ಹಾಗೂ ಧಾರ್ಮಿಕ ಉಪಯೋಗದ ಸಾಮಗ್ರಿಗಳನ್ನು ಭಕ್ತಿಭಾವದಿಂದ ಅರ್ಪಿಸಲಾಯಿತು

ಈ ಮೂಲಕ ಸಂಘವು ದೇವಸ್ಥಾನದ ಮಹೋತ್ಸವಕ್ಕೆ ತನ್ನ ಭಕ್ತಿಪೂರ್ಣ ಸಹಕಾರವನ್ನು ಸಲ್ಲಿಸಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ವಲೇರಿಯನ್ ರೊಡ್ರಿಗಸ್, ಉಪಾಧ್ಯಕ್ಷರಾದ ಅನಿಲ್ ಪ್ರಕಾಶ್ ಡಿಸೋಜ, ಮುಖ್ಯ ಕಾರ್ಯನಿರ್ವಣಾಧಿಕಾರಿ ವಿಲ್ಸನ್ ನೆಲ್ಸನ್ ಮೋನಿಸ್ ಉಪಸ್ಥಿತರಿದ್ದರು. ನಿರ್ದೇಶಕರಾದ ಸುನಿಲ್ ಸಂತೋಷ್ ಮೋರಾಸ್, ಗೀತಾ ಫೆಲ್ಸಿಯಾನ ಡಿಸೋಜ ಹಾಗೂ ಅರುಣ್ ಸಂದೇಶ್ ಡಿಸೋಜ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪ್ರಧಾನ ಕಚೇರಿ ವ್ಯವಸ್ಥಾಪಕರಾದ ಪ್ರವೀಣ್ ಪಿಂಟೋ ಹಾಗೂ ಸಿಬ್ಬಂದಿ ವಿನೋಲ್ ಕ್ರಾಸ್ತ ಸೇರಿದಂತೆ ಸಂಘದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಹೊರೆ ಕಾಣಿಕೆಯನ್ನು ಸಮರ್ಪಿಸಿದರು.

LEAVE A REPLY

Please enter your comment!
Please enter your name here