







ಬೆಳ್ತಂಗಡಿ : ತಾಲೂಕು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಮಾ.1ರಂದು ಯಾತ್ರೆ ಕೈಗೊಳ್ಳಲಾಯಿತು.ಪ್ರತಿ ವರ್ಷವೂ ಸಂಘದ ವತಿಯಿಂದ ಶೃಂಗೇರಿ ಶ್ರೀ ಶಾರದಾ ಪೀಠಕ್ಕೆ ಯಾತ್ರೆ ಕೈಗೊಂಡು ಶೃಂಗೇರಿ ಶಾರದಾ ಪೀಠದ ಶ್ರೀಗಳ ಪಾದ ಪೂಜೆ ಮತ್ತು ಭಿಕ್ಷಾವಂದನೆ ನೆರವೇರಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ ಈ ಬಾರಿಯೂ ಸಂಘದ ಆಡಳಿತ ಸಮಿತಿ ಮತ್ತು ಇತರರು ಸೇರಿ ಶೃಂಗೇರಿ ಶಾರದಾ ಪೀಠಕ್ಕೆ ಯಾತ್ರೆ ಕೈಗೊಂಡು ಶ್ರೀಗಳ ಪಾದಪೂಜೆ ಮತ್ತು ಭಿಕ್ಷಾ ವಂದನೆ ನೆರವೇರಿಸಲಾಯಿತು.

ಮರಾಟಿ ನಾಯ್ಕ ಸಮಾಜದವರು ಒಗ್ಗಟ್ಟಿನಿಂದಿದ್ದು ಸಂಘವನ್ನು ಬಲಪಡಿಸಬೇಕು ಎಂದು ಆಶೀರ್ವದಿಸಿದರು.


ನಂತರ ಕನಕಗಿರಿಯಲ್ಲಿರುವ ಶಂಕರಾಚಾರ್ಯರ ಬೃಹತ್ ಪ್ರತಿಮೆಗೆ ನಮಸ್ಕರಿಸಲಾಯಿತು. ಯಾತ್ರೆಯಲ್ಲಿ ಅಧ್ಯಕ್ಷ ಸತೀಶ್ ಹೆಚ್. ಎಲ್., ಗೌರವಾಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ಪ್ರಭಾಕರ ನಾಯ್ಕ, ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ, ಕಾರ್ಯದರ್ಶಿ ಸುರೇಶ್ ಹೆಚ್ ಎಲ್, ಪವಿತ್ರಾ ಲೋಕೇಶ್, ಸಂಘಟನಾ ಕಾರ್ಯದರ್ಶಿ ಪ್ರಸಾದ್ ನಾಯ್ಕ, ಮಾಧ್ಯಮ ಕಾರ್ಯದರ್ಶಿ ಹರ್ಷಿತ್ ಪಿಂಡಿವನ, ಶರತ್ ನಾಯ್ಕ, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್, ಚಂದ್ರಾವತಿ, ಐತಪ್ಪ ನಾಯ್ಕ, ಲೋಕೇಶ್, ನಾರಾಯಣ ನಾಯ್ಕ, ಯೋಗೀಶ, ಜಯಂತಿ, ಅರುಣ, ಮೋಹಿನಿ, ಪುಷ್ಪಾವತಿ, ಯಶ, ನಿತ್ಯುಷ ಹೆಚ್. ಎಸ್., ಹೆತ್ವಿಶ್, ಹೇಶ್ವಿತ್, ವಿಶ್ರುತ್ ಕೆ.ಎಸ್., ಅಕ್ಷರ್, ಧನ್ವಿತ್, ಆದ್ಯ ಹಾಗೂ ಇತರರು ಭಾಗವಹಿಸಿದ್ದರು.









