ಕುದ್ರಡ್ಕ: ಪಾಲೆದು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರು ಪೂಜ್ಯ ಡಾ: ಡಿ ವಿರೇಂದ್ರ ಹೆಗ್ಡೆ ಅವರು ಸಂಸದರ ನಿಧಿಯಿಂದ ಮಂಜೂರು ಮಾಡಿದ 1,45,000 ಮೌಲ್ಯದ ಸ್ಮಾರ್ಟ್ ಟಿವಿಯನ್ನು ಫೆ.27 ರಂದು ಬಿಡುಗಡೆ ಮಾಡಲಾಯಿತು.

ಮುಖ್ಯ ಶಿಕ್ಷಕರು ಮಂಜುಳಾ ಅವರು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ತಾವು ನೀಡಿದ ಈ ಕೊಡುಗೆಯು ಶೈಕ್ಷಣಿಕ ಅಭಿವೃದ್ಧಿಗೆ ಬಹಳ ಸಹಕರಿಯಾಗಿದೆ. ತಮ್ಮ ಈ ಸಮಾಜಮುಖಿ ಕಾರ್ಯಕ್ಕೆ ಶಿಕ್ಷಣ ಮೇಲಿನ ಕಾಳಜಿಗೆ ನಾವು ಸದಾ ಋಣಿಯಾಗಿದ್ದೇವೆ.

ಕಾರ್ಯಕ್ರಮದಲ್ಲಿ ಶಾಲಾ SDMC ಅಧ್ಯಕ್ಷ ಅನಿಲ ಕುಮಾರ, ಕೃಷಿ ಮೇಲ್ವಿಚಾರಕ ಕೃಷ್ಣ ಗೌಡ, ಪಾರೆಂಕಿ C ಒಕ್ಕೂಟ ಅಧ್ಯಕ್ಷ ಹರೀಶ, ಶಾಲಾ ಮುಖ್ಯ ಶಿಕ್ಷಕರು ll ಮಂಜುಳಾ, ಶ್ರದ್ದಾ, ವಿದ್ಯಾ, ಸೇವಾಪ್ರತಿನಿಧಿ ನಂದಿನಿ, ಹಾಗೂ sdmc ಉಪಾಧ್ಯಕ್ಷರು ಇಕ್ಬಾಲ್, ವಿದ್ಯಾರ್ಥಿ ಪಾಲಕರು ವಿಜಯಶ್ರೀ, ಶಶಿಕಲಾ, ಶಾಂತ, ಸುಜಾತ, ಚೈತ್ರ, ಸಂದ್ಯಾ, ಶಕುಂತಲಾ, ಸುಶೀಲ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here