ಬಾರ್ಯ ಅಕ್ರಮ ಗೋ ಮಾಂಸ ಮಾರಾಟ ಪತ್ತೆ: ಪ್ರಕರಣ ದಾಖಲು

0

ಬೆಳ್ತಂಗಡಿ,: ಬಾರ್ಯ ಗ್ರಾಮದ ಹೊಸವಕು ಪ್ರದೇಶದಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಸಿ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಅಪರಾಧ ಸಂಖ್ಯೆ 27/2026ರಡಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020ರ ಕಲಂ 4 ಮತ್ತು 12 ಹಾಗೂ ಬಿಎನ್‌ಎಸ್‌ಎಸ್ 2023ರ ಕಲಂ 3(5) ಅನ್ವಯ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಫೆ. 26 ರಂದು ಪ್ರಕರಣ ದಾಖಲಾಗಿದೆ.

ಫೆಬ್ರವರಿ 26ರಂದು ರಾತ್ರಿ 7.30 ಗಂಟೆ ಸುಮಾರಿಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯ ಪಿಎಸ್‌ಐ ಸುತೇಶ್ ಕೆ.ಪಿ. ಅವರು ಸಿಬ್ಬಂದಿಯವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಹೊಸವಕು ಪ್ರದೇಶದ ಮನೆಯಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೆರೆಗೆ, ತಕ್ಷಣ ಪಿಸಿ 1966, ಪಿಸಿ 449 ಹಾಗೂ ಚಾಲಕ ಎಪಿಸಿ 102ರೊಂದಿಗೆ ಇಲಾಖಾ ಜೀಪಿನಲ್ಲಿ ರಾತ್ರಿ 8.20 ಗಂಟೆಗೆ ಸ್ಥಳಕ್ಕೆ ತೆರಳಿದರು.

ಪೊಲೀಸರ ಜೀಪ್ ಶಬ್ದ ಕೇಳಿ ಮನೆಯೊಂದರ ಶೆಡ್ ಬಳಿಯಿಂದ ಇಬ್ಬರು ವ್ಯಕ್ತಿಗಳು ಓಡಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಬಳಿಕ ಪಂಚರ ಸಮಕ್ಷಮದಲ್ಲಿ ಶೆಡ್‌ ಪರಿಶೀಲನೆ ನಡೆಸಿದಾಗ, ನೆಲದ ಮೇಲೆ ಬಿಳಿ ಪ್ಲಾಸ್ಟಿಕ್ ಟರ್ಬಲ್ ಮೇಲೆ ತಲಾ 1 ಕೆ.ಜಿ. ತೂಕದ 30 ಪ್ಯಾಕೆಟ್‌ಗಳು, ಮರದ ಬುಟ್ಟಿಯಲ್ಲಿ 20 ಪ್ಯಾಕೆಟ್‌ಗಳು ಹಾಗೂ ಆಟೋ ರಿಕ್ಷಾದಲ್ಲಿ ತಲಾ 2 ಕೆ.ಜಿ. ತೂಕದ ಪ್ಯಾಕೆಟ್‌ಗಳು ಪತ್ತೆಯಾಗಿವೆ.

ಒಟ್ಟು ಮಾಂಸದ ಅಂದಾಜು ಮೌಲ್ಯ ರೂ.11,200 ಎಂದು ಅಂದಾಜಿಸಲಾಗಿದೆ.ಇದಲ್ಲದೆ ತೂಕದ ಯಂತ್ರ (ಅಂದಾಜು ರೂ.2,000), ಕೆಂಪು ಹಿಡಿಯ ಚಾಕು (ರೂ.100), ವಿವೋ ಮೊಬೈಲ್ ಫೋನ್ (ರೂ.10,000), ಕೆಎ-70-ಎ-1421 ನೋಂದಣಿ ಸಂಖ್ಯೆಯ ಕಪ್ಪು ಬಣ್ಣದ ಆಟೋ ರಿಕ್ಷಾ (ಅಂದಾಜು ರೂ.1,50,000) ಹಾಗೂ ಮರದ ಬುಟ್ಟಿ (ರೂ.100) ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಹೆಚ್. ಅಬ್ದುಲ್ ರಹಿಮಾನ್, ಅವರ ಪತ್ನಿ ರಹಮತ್ ಕೆ. ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಘಟನೆ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ರಾತ್ರಿ 11.15 ಗಂಟೆಗೆ ವರದಿ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here