







ಉಜಿರೆ: ಶ್ರೀ ಜನಾರ್ಧನ ಸ್ವಾಮಿಯ ಬ್ರಹ್ಮಕಲಶೋತ್ಸವ ಮಾರ್ಚ್ 3ರಿಂದ ಮಾರ್ಚ್ 11ನೇ ತಾರೀಕಿನವರೆಗೆ ಭಕ್ತಿ ಸಡಗರ ಸಂಭ್ರಮ ವಿಜ್ರಂಭಣೆಯಿಂದ ನಡೆಯಲಿದ್ದು,ವಿಜಯ ಗೋಪುರ ಲೋಕಾರ್ಪಣೆ,ನೂತನ ಬ್ರಹ್ಮರಥ ಮತ್ತು ಪುಷ್ಪರಥ ಸಮರ್ಪಣೆಯ ಮಹಾ ವೈಭವ ನಡೆಯಲಿದ್ದು,ಈ ಮಹಾ ವೈಭವವನ್ನು ನಮ್ಮ ಕಣ್ಣಿನಲ್ಲಿ ನೋಡುವುದು ಹಿರಿಯರು ಮಾಡಿದ ಪುಣ್ಯದ ಫಲದ ಸೌಭಾಗ್ಯ.



ಮಾ.2 ರಂದು ಡಾ. ಶ್ರೀ ಡಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಂತೆ ಲಾಯಿಲ ಗ್ರಾಮದ ಗಣ್ಯರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಸದಸ್ಯರು ಹಾಗೂ ಊರವರ ಸಂಪೂರ್ಣವಾದ ಸಹಕಾರದೊಂದಿಗೆ 1000 ತೆಂಗಿನಕಾಯಿ, ಅಕ್ಕಿ, ತರಕಾರಿಗಳು, ಬಾಳೆಗೊನೆ, ಸೀಯಾಳ, ಬೆಲ್ಲ, ಸಕ್ಕರೆ, ವೀಳ್ಯದೆಲೆ, ಮಾವಿನ ಮಿಡಿ, ಹಲಸಿನ ಕಾಯಿಯನ್ನು ಹೊರೆಕಾಣಿಕೆಯಲ್ಲಿ ಭಕ್ತರೊಂದಿಗೆ ಸೇರಿಕೊಂಡು ಲಾಯಿಲದಿಂದ ಉಜಿರೆಯವರೆಗೆ ಭಕ್ತರ ಒಂದುಗೂಡುವಿಕೆಯಲ್ಲಿ ಹೊರಕಣಿಕೆ ಸಾಗಿ ಬರಲಿದೆ. ಎಂದು ಬೆಳ್ತಂಗಡಿ ತಾಲೂಕಿನ ಹಿರಿಯ ವಕೀಲ ಬಿ ಕೆ ಧನಂಜಯ್ ರಾವ್ ರವರು ತಿಳಿಸಿದರು.
ಲಾಯಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಿರೀಶ್ ಡೊಂಗ್ರೆ, ಪಿಲಿಪಂಜರ ದೈವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುರೇಶ್ ಬರಮೇಲು, ಲಾಯಿಲ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಗಣೇಶ್ ಆರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಬಿ ಎಲ್, ಲಾಯಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಅಧ್ಯಕ್ಷರು ಲಾಯಿಲ ಒಕ್ಕೂಟ ಆಶಾ ಸಲ್ದಾನ, ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ್ ಆರ್ , ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸದಸ್ಯ ಗುರು ಅಜೆಕಲ್ ಪಿಲಿಪಂಜರ ದೈವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಅನಿಲ್ ಕಾಶಿಬೆಟ್ಟು, ಮೇಲ್ವಿಚಾರಕ ರಾಮ್ ಕುಮಾರ್ ಮತ್ತು ಸುಶಾಂತ್, ಸೇವಾಪ್ರತಿನಿಧಿ ಗೀತಾ, ಗ್ರಾಮಸ್ಥರು ಮತ್ತು ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.









