ರಬ್ಬರ್ ಕಾರ್ಮಿಕರ ಜೀವನ ಭದ್ರತೆಗಾಗಿ ಬ್ರಿಜೇಶ್ ಚೌಟ ಅವರಿಗೆ ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಕೃಷಿ ಮಜ್ದೂರ್ ಸಂಘದಿoದ ಮನವಿ

1

ಮಂಗಳೂರು : ಅಸಂಘಟಿತ ರಬ್ಬರ್ ಕಾರ್ಮಿಕರ ಜೀವನ ಭದ್ರತೆಗೆ ರಬ್ಬರ್ ಬೋರ್ಡ್ ನಿಂದ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಂತೆ ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಕೃಷಿ ಮಜ್ದೂರ್ ಸಂಘದಿಂದ ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ ಅವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಬ್ಬರ್ ಕೃಷಿಯಿದ್ದು ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಧಿಕ ರಬ್ಬರ್ ಬೆಳೆ ಇರುತ್ತದೆ. ರಬ್ಬರ್ ಟ್ಯಾಪಿಂಗ್ ವೃತ್ತಿಯನ್ನು ನಡೆಸುತ್ತಿರುವ ಅಸಂಖ್ಯಾತ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಕ್ಕೆ ಸರಕಾರ ಅಥವಾ ರಬ್ಬರ್ ಬೋರ್ಡ್ನಿಂದ ಯಾವುದೇ ರೀತಿಯ ವಿಶೇಷ ಸಹಕಾರಗಳು ಲಭಿಸಿರುವುದಿಲ್ಲ.

ರಬ್ಬರ್ ಬೋರ್ಡ್ ನಲ್ಲಿರುವ ಸಹಾಯಧನಗಳು ಕೂಡ ತೀರಾ ಅತ್ಯಲ್ಪವಾಗಿದ್ದು ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಕಾರ್ಮಿಕರು ಹರಸಾಹಸ ಪಡಬೇಕಾಗಿದೆ. ಹಾಗೂ ಇದರ ಅರ್ಜಿಯ ಪ್ರಕ್ರಿಯೆಯು ಇನ್ನೂ ಆನ್‌ಲೈನ್ ಮೂಲಕ ಪಡೆದುಕೊಳ್ಳದೆ ಮ್ಯಾನುವಲ್ ಆಗಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಆದುದರಿಂದ ರಬ್ಬರ್ ಕಾರ್ಮಿಕರ ಜೀವನಕ್ಕೆ ಸಹಕಾರಿಯಾಗಬಲ್ಲ ಪೂರಕ ಯೋಜನೆಗಳಾದ ಕಾರ್ಮಿಕರ ಆಸ್ಪತ್ರೆ ಚಿಕಿತ್ಸಾ ವೆಚ್ಚ ಕನಿಷ್ಠ 2 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು.

ಭೂಮಿ ಹೊಂದಿರದ ಕಾರ್ಮಿಕರಿಗೆ ಸೈಟ್ ನೀಡಬೇಕು ಹಾಗೂ ಗೃಹ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ಸಹಾಯಧನ ನೀಡಬೇಕು. ಅಪಘಾತ ಮರಣಕ್ಕೆ 5 ಲಕ್ಷ ರೂಪಾಯಿ ನೀಡಬೇಕು ಹಾಗೂ ಇತರ ಮರಣಕ್ಕೆ 2 ಲಕ್ಷ ರೂಪಾಯಿ ನೀಡಬೇಕು. ಎಸ್.ಸಿ/ಎಸ್.ಟಿ ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರ ಮತ್ತು ಮಕ್ಕಳ ವಿವಾಹ ಸಹಾಯಧವನ್ನು 1 ಲಕ್ಷಕ್ಕೆ ಏರಿಸಬೇಕು.

ಕಾರ್ಮಿಕರ ದುರ್ಬಲತೆಯ ಸಂಧರ್ಭದಲ್ಲಿ ಪರಿಹಾರ ಮತ್ತು ಪಿಂಚಣಿ ಒದಗಿಸಬೇಕು. ಕಾರ್ಮಿಕರಿಗೆ ವೃದ್ಧಾಪ್ಯ ಪಿಂಚಣಿಯನ್ನು ನೀಡಬೇಕು. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಹೆಚ್ಚಿಸಬೇಕು. ಮರಣ ಹೊಂದಿದ ಕಾರ್ಮಿಕರ ಪತ್ನಿಗೆ ವಿಧವಾ ವೇತನ ಜಾರಿಗೊಳಿಸಬೇಕು ಹಾಗೂ ಅಪ್ರಾಪ್ತ ಮಕ್ಕಳಿದ್ದರೆ ಅವರ ಜೀವನಕ್ಕೆ ಹಾಗೂ ವಿಧ್ಯಾಭ್ಯಾಸಕ್ಕೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು.

ಜೂನ್, ಜುಲೈ, ಆಗಸ್ಟ್ ತಿಂಗಳಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ವಿಪರೀತವಾಗಿ ಇರುವುದರಿಂದ ಕಾರ್ಮಿಕರಿಗೆ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಈ ಸಂಧರ್ಭದಲ್ಲಿ ಕಾರ್ಮಿಕರಿಗೆ ಜೀವನಾವಶ್ಯಕ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಮನವಿಯಲ್ಲಿ ಕೋರಿಕೊಂಡಿದ್ದಾರೆ.

ಸಂಘದ ಜಿಲ್ಲಾಧ್ಯಕ್ಷ ರಘುಪತಿ ತೊಡಿಕಾನ, ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜೈ ರಾಜ್ ಸಾಲಿಯನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಜೆ.ಕೆ., ಜಿಲ್ಲಾ ಉಪಾಧ್ಯಕ್ಷ ರಾಜ ಮಾಚಾರ್, ಜಿಲ್ಲಾ ಖಜಾಂಜೀ ಅಯ್ಯಪ್ಪ, ಜಿಲ್ಲಾ ಜೊತೆ ಕಾರ್ಯದರ್ಶಿ ನಾಗೇಂದ್ರ, ಜಿಲ್ಲಾ ಕಾರ್ಯದರ್ಶಿ ಮೋಹನ್ ಕುಮಾರ್, ಉಡುಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ್ ರಾಜ್, ಪುತ್ತೂರು ತಾಲೂಕ ಅಧ್ಯಕ್ಷರಾದ ಅಮೃತಲಿಂಗ ಮತ್ತು ನಂದೀಶ್ ಭಂಡಾರಿ ಮುಂಡಾಜೆ ಉಪಸ್ಥಿತರಿದ್ದರು.

1 COMMENT

  1. ಅತಿಯದ ದುಡ್ಡಿನ ವ್ಯಾಮೋಹಕ್ಕೆ ತನ್ನಷ್ಟಕ್ಕೆ ಬೆಳೆದು ಪ್ರಾಣಿ ಪಕ್ಷಿಗಳಿಗೆ ಬೇಕಾದ ಆಹಾರ ನಿಡುತ್ತಿದ್ದ ಮರ ಗಿಡಗಳನ್ನು ಕಡಿದು ಪ್ರಕೃತಿಯ ಪ್ರಾಕೃತಿಕ ಸೌಂದರ್ಯಯವನ್ನು ನಾಶಮಾಡುತ್ತೀರುವ ರಬ್ಬರ್ ಬೇಳೆಗಾರರಿಗೆಕೆ ಭದ್ರತೆ ಕೊಡಬೇಕು…???

LEAVE A REPLY

Please enter your comment!
Please enter your name here