







ಮುಂಡೂರು: ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆ ಗುತ್ತುವಿನಲ್ಲಿ ಫೆ. 21 ರಂದು ದೈವಗಳಿಗೆ ಪಂಚಪರ್ವ, ಶ್ರೀ ಬ್ರಹ್ಮಬೈದರ್ಲು ಕೋಟಿ ಚೆನ್ನಯರ ದರುಶನ ಸೇವೆ ನಡೆಯಿತು.

ಬೆಳಿಗ್ಗೆ ಪಾಪಿನಡೆ ಗುತ್ತಿನ ಕುಟುಂಬಸ್ಥರ ಧರ್ಮ ಚಾವಡಿಯಲ್ಲಿ ಗಣಹೋಮ, ಮೂಲನಾಗ ಬನದಲ್ಲಿ ನಾಗಬ್ರಹ್ಮ ದೇವರಿಗೆ ತನು ತಂಬಿಲ ಸೇವೆ, ಧರ್ಮ ದೈವಗಳಿಗೆ ಪಂಚಪರ್ವ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಶುದ್ದಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.ಸಂಜೆ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕಾಶಿ ಮಠ ವಾರಣಾಸಿ ಆಗಮಿಸಿದ್ದು ಇವರನ್ನು ಭವ್ಯ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ಬಳಿಕ ಬ್ರಹ್ಮಬೈದೆರ್ಲು ಕೋಟಿ ಚೆನ್ನಯರ ದರುಶನ ಸೇವೆ, ಪ್ರಸಾದ ವಿತರಣೆ, ರಾತ್ರಿ ಅನ್ನಸಂತರ್ಪಣೆ ನಡೆಯಿತು.



ಫೆ.22 ಬೆಳಿಗ್ಗೆ ದೈವಗಳಿಗೆ ಅಗೇಲು ಸೇವೆ, ಸಂಜೆ ಕುಪ್ಪೆಟ್ಟಿ ದೈವಗಳಿಗೆ ಪಂಚಪರ್ವ ಅಗೇಲು ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಕಾರ್ಯಕ್ರಮದಲ್ಲಿ ಚಾಮರಾಜ ಸೇಮಿತ ಮುಂಡೂರು ಗುತ್ತು, ಅಶೋಕ ಜೈನ್ ಮುಂಡೂರು ಗುತ್ತು, ಚಿದಾನಂದ ಶೆಟ್ಟಿ ಏರಾಜೆ, ಚಂದ್ರ ಶೇಖರ್ ಕಾಯರ್ ದೊಟ್ಟು ಗುತ್ತು, ಚಂದಪ್ಪ ಶೆಟ್ಟಿ ಅಂದಿಲ ಗುತ್ತು, ಸುರೇಶ್ ಪೂಜಾರಿ, ಕುರಂಬೊಟ್ಟು, ಲಕ್ಷ್ಮೀಶ ಪಾಲೇದಡಿ ಗುತ್ತು, ರವಿಚಂದ್ರ ಅರುವದಕಲ, ನೀತಾ ಮಹೇಶ್ ಕುಮಾರ್, ಅನಿಲ್ ಕಿನಿಂಜ, ರಮಾನಂದ ಸಾಲಿಯಾನ್ ಮುಂಡೂರು, ಸಂತೋಷ್ ಕುಮಾರ್ ಮುಂಡೂರು, ರಾಜೀವ್ ಸಾಲಿಯಾನ್ ಮುಂಡೂರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ, ಪಾಪಿನಡೆ ಪ್ರತಿಷ್ಠಾನಾದ ಅಧ್ಯಕ್ಷರು ರಾಜೀವ, ಉಪಾಧ್ಯಕ್ಷೆ ಡಾ. ಚಂದ್ರಾವತಿ ನೂಜೇಲು, ಕಾರ್ಯದರ್ಶಿ ಚೇತನ್ ಗೇರುಕಟ್ಟೆ, ಕೋಶಾಧಿಕಾರಿ ಬ್ರಿಜ್ಞೆಶ್ ಜೆ. ಕೋಟ್ಯಾನ್, ಜತೆ ಕಾರ್ಯದರ್ಶಿ ಜಗನ್ನಾಥ ಅಂತ್ರ0ಗೆ, ಗೌರವ ಸಲಹೆಗಾರರಾದ ಆನಂದ ಸುವರ್ಣ ಮಂಗಳೂರು ಜಗನ್ನಾಥ ಪಾಪಿನಡೆ, ನಿತಿನ್ ಗೇರುಕಟ್ಟೆ,ಜಗನ್ನಾಥ ಪೂಜಾಫಲ, ಶಶಿಧರ ಬಳ್ಳಾರಿ, ಶುಭಕರ ಸುಲ್ಯೊಡಿ, ಹೇಮಾವತಿ ಕೊಡಿಬಾಳೆ, ಅರುಣ್ ಕೆಳಗಿನಬೆಟ್ಟು, ಸುಕೇಶ್ ಹಿಬರೋಡಿ, ಸಂತೋಷ್ ಕುಮಾರ್ ಮೇಗಿನ ಕಿನಿಂಜ, ಉಮೇಶ್ ನಾವೂರು, ಹರ್ಷಿತ್ ಕರಂಬಾರು, ನೊಣಯ್ಯ ಹಿಬರೋಡಿ, ಜಯಾನಂದ ಕುಮುಟಾ, ನವೀನ ಹಿಬರೋಡಿ, ಸುಧಾಕರ್ ಮಾಡವು, ಪುನೀತ್ ಶಿರ್ಲಾಲ್, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ಗಗನ್ ಮಡಿಕೇರಿ, ಕಾರ್ತಿಕ್ ಮಂಗಳೂರು,ಕಶ್ಯಪ್ ಕುದ್ರೋಳಿ, ಸಂದೀಪ್ ರಾಜ್ ನೂಜೇಲು, ಶ್ರೀಕಾಂತ್ ಕಡಿ ಗೇರುಬೆಟ್ಟು, ಚಿದಾನಂದ ಮಾನ್ಯರೊಟ್ಟು, ಬಾಬು ಪೂಜಾರಿ ಪರನೀರು, ಸೋಮಪ್ಪ ಪೂಜಾರಿ ಮಾನ್ಯರೊಟ್ಟು. ಹಾಗೂ ಮುಂಡೂರು, ಮೇಲಂತಬೆಟ್ಟು, ಸವಣಾಲು, ಕರಂಬಾರು ಗುತ್ತು ಮನೆಯವರು, ಬರ್ಕೆಯವರು, ಗ್ರಾಮಸ್ಥರು, ಊರ ಪರ ಊರವರು ಭಾಗವಹಿಸಿ ಸಹಕರಿಸಿದರು.









