






ಪುತ್ತೂರು : ವಿನೂತನ ತಂತ್ರಜ್ಣಾನ , ದೃಢವಾದ ನಿರ್ಮಾಣ ಗುಣಮಟ್ಟ ಹಾಗೂ ಅತ್ಯಾಧುನಿಕ ವಿನ್ಯಾಸದ ಜೊತೆಗೆ ಇಲೆಕ್ಟ್ರಿಕ್ ಕಾರುಗಳ ತಯಾರಿಕೆಯಲ್ಲೂ ಸದಾ ಮುಂಚೂಣಿಯಲ್ಲಿರುವ ಭಾರತೀಯರ ಹೆಮ್ಮೆಯ ಹೆಸರಾಂತ ಕಾರು ತಯಾರಿಕಾ ಸಂಸ್ಥೆ ಟಾಟಾ ಮೋಟರ್ಸ್ ನ ಕರಾವಳಿಯ ಹೆಸರಾಂತ ಡೀಲರ್ ಅಟೋ ಮ್ಯಾಟ್ರಿಕ್ಸ್ ಇದರ ಪುತ್ತೂರು ಶಾಖೆಯು ಫೆ.22 ರಂದು ಇಲ್ಲಿನ ಬೊಳುವಾರು ಮುಖ್ಯ ರಸ್ತೆ ಬಳಿ ಅದ್ಧೂರಿಯಾಗಿ ಶುಭಾರಂಭಗೊಂಡಿತು.

ಮಂಗಳೂರಿನ ಅಟೋ ಮ್ಯಾಟ್ರಿಕ್ಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಿ.ರಾಜೇಂದ್ರ ಕುಮಾರ್ ಇವರ ಅತ್ತೆ – ಮಾವ ನಿವೃತ್ತ ವೈದ್ಯ ಡಾ.ತೋಡಾರ್ ನಾಗ ಕುಮಾರ್ ಶೆಟ್ಟಿ ಕದ್ರಿ ಮತ್ತು ಉಷಾ ಎನ್ ಶೆಟ್ಟಿ ದಂಪತಿ ದೀಪ ಪ್ರಜ್ವಲನೆ ನೆರವೇರಿಸೋ ಮೂಲಕ ವಿನೂತನ ಮಳಿಗೆಯನ್ನು ಉದ್ಘಾಟಿಸಿ , ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶುಭವನ್ನು ಹಾರೈಸಿದರು.


ಅಟೋ ಮ್ಯಾಟ್ರಿಕ್ಸ್ ನ ಆಡಳಿತ ನಿರ್ದೇಶಕರಾದ ಡಿ.ರಾಜೇಂದ್ರ ಕುಮಾರ್ ಹಾಗೂ ಅವರ ಪತ್ನಿ , ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ.ನೀತಾ ಆರ್ ಕುಮಾರ್ , ಮಕ್ಕಳಾದ ಮಹಿಕಾ ಮತ್ತು ಶಾಲಿಕಾ , ವಿದ್ಯಾ , ಟಾಟಾ ಮೋಟಾರ್ಸ್ ನ ರಿಜನಲ್ ಮ್ಯಾನೇಜರ್ ಪ್ರಶಾಂತ್ , ಏರಿಯಾ ಮ್ಯಾನೇಜರ್ ಅಭಿ಼ಷೇಕ್ ಹಾಗೂ ಕಸ್ಟಮರ್ ಕೇರ್ ನ ಮುರ್ತಝ , ಅಟೋ ಮ್ಯಾಟ್ರಿಕ್ಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್ ಮಯ್ಯ , ಜಿ.ಎಂ. (ಸರ್ವೀಸ್)ರಾಜಾರಾಮ್ , ಜಿ.ಎಂ (ಸೇಲ್ಸ್)ಪ್ರವೀಣ್ ಶೆಟ್ಟಿ , ನಿರಂಜನ್ ಪೈ , ವಿಮಾ ವಿಭಾಗದ ಮುಖ್ಯಸ್ಥ ಸಂಜಯ್ ಕುಮಾರ್ , ಪುತ್ತೂರು ಸಂಸ್ಥೆಯ ಸರ್ವೀಸ್ ಮ್ಯಾನೇಜರ್ ಸಂದೀಪ್ ಕುಮಾರ್ ಹಾಗೂ ಸೇಲ್ಸ್ ಮ್ಯಾನೇಜರ್ ವಿಕಾಸ್ ಬಿ.ಎಂ ವೇದಿಕೆಯಲ್ಲಿ ಹಾಜರಿದ್ದರು.

ಶಾಸಕ ಅಶೋಕ್ ಕುಮಾರ್ ರೈ ಸಹಿತ ಗ್ರಾಹಕರಾದ ರಾಮ ಪ್ರಸಾದ್ ಮತ್ತು ಅರುಣಾ ರಾಮ ಪ್ರಸಾದ್ ದಂಪತಿ , ಜಿ.ಎಲ್ ಬಲರಾಂ ಆಚಾರ್ಯ , ಮಹಾವೀರ ಮೆಡಿಕಲ್ ಸೆಂಟರ್ ನ ಆಡಳಿತ ನಿರ್ದೇಶಕರಾದ ಡಾ.ಆಶೋಕ್ ಪಡಿವಾಳ್ , ಅರುಣಾ ಕಲಾ ಮಂದಿರ ಮಾಲೀಕ ರಮಾನಂದ ನಾಯಕ್ , ಮುಳಿಯ ಕೇಶವ ಪ್ರಸಾದ್ , ಪ್ರೊ ಕಬಡ್ಡಿ ಪ್ಲೇಯರ್ , ಪಟ್ನ ಪೈರೆಟ್ಸ್ ನ ಸಹಾಯಕ ಕೋಚ್ ಪ್ರಶಾಂತ್ ರೈ , ಐಶ್ವರ್ಯ ಗ್ರೂಪ್ ನ ರವಿಶಂಕರ್ ಭಟ್ ಮತ್ತು ಪ್ರಾರ್ಥನಾ ಗ್ರೂಪಿನ ರಘವೀರ್ ಪ್ರಭು ಸಹಿತ ಹಲವರು ಅತಿಥಿಗಳು ನೂತನ ಮಳಿಗೆಗೆ ಆಗಮಿಸಿ ಶುಭ ಹಾರೈಸಿದರು.ಅಟೋ ಮ್ಯಾಟ್ರಿಕ್ಸ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಿ.ರಾಜೇಂದ್ರ ಕುಮಾರ್ ಅತಿಥಿಗಳೆಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ವಿವಿಧ ವಿಭಾಗದ ಸಿಬಂದಿಗಳು ಸಹಕಾರ ನೀಡಿದರು.









