






ಬೆಳ್ತಂಗಡಿ :ದ.ಕ. ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ2024-25ನೇ ಸಾಲಿನ ಎಸ್ಡಿಎಂಸಿಗಳ ಕಾರ್ಯವೈಖರಿ ಸಮೀಕ್ಷೆಯಲ್ಲಿ ಪ್ರತಿ ತಾಲೂಕಿನಿಂದ ಮೂರು ಶಾಲಾ ಎಸ್ ಡಿ ಎಂ ಸಿ ಉತ್ತಮ ಎಂದು ಗುರುತಿಸಿ ಫಲಿತಾಂಶ ಪ್ರಕಟ ಗೊಳಿಸಿದೆ.



ಪ್ರೌಢ ಶಾಲಾ ವಿಭಾಗದಲ್ಲಿ ವೇಣೂರು ಸರಕಾರಿ ಪ್ರೌಢ ಶಾಲೆಯ ಎಸ್ಡಿಎಂಸಿ, ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸರಕಾರಿ ಹಿ. ಪ್ರಾ. ಶಾಲೆ ಬರಂಗಾಯದ ಎಸ್ ಡಿ ಎಂ ಸಿ , ಕಿ. ಪ್ರಾ.ಶಾಲಾ ವಿಭಾಗದಲ್ಲಿ ಸ. ಕಿ. ಪ್ರಾ. ಶಾಲೆ ಪೆರಿಯಡ್ಕ (ದೊಂಪದಪಲ್ಕೆ ) ಬೆಳಾಲು ಆಯ್ಕೆ ಗೊಂಡಿದೆ.

ಪ್ರೌಢ ಶಾಲಾ ವಿಭಾಗಕ್ಕೆ ರೂ. 1ಲಕ್ಷ, ಹಿ.ಪ್ರಾ. ಶಾಲೆಗೆ ರೂ. 75 ಸಾವಿರ, ಕಿ. ಪ್ರಾ. ಶಾಲೆಗೆ ರೂ. 50 ಸಾವಿರ ನಗದು ಪುರಸ್ಕಾರ ಲಭಿಸಲಿದೆ. ಶಾಲೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಲ್ಲದೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಎಸ್ಡಿಎಂಸಿ ಶ್ರಮಿಸಿದ ಸಾಧನೆಯನ್ನು ಪರಿಗಣಿಸಿ ಜಿಲ್ಲೆಯಲ್ಲಿ ಹಲವು ಶಾಲೆಗಳಿಗೆ ಪ್ರಶಸ್ತಿಗಳು ಬಂದಿದೆ.










