







ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ, ಉಜಿರೆ ಮತ್ತು ಕೇಂದ್ರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಮಂಡಳಿ, ಆಯುಷ್ ಮಂತ್ರಾಲಯದ ಸಹಯೋಗದಲ್ಲಿ , ಫೆ.19 ರಂದು ,SDM ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಆಸ್ಪತ್ರೆ, ಶಾಂತಿವನದಲ್ಲಿ “ಅತಿಸ್ಥೂಲ ನಿರ್ವಹಣೆಗೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಲಾಯಿತು.

ಮುಖ್ಯ ಉದ್ದೇಶ ಅತಿಸ್ಥೂಲ (Obesity) ಸಮಸ್ಯೆಯನ್ನು ಔಷಧರಹಿತ, ವೈಜ್ಞಾನಿಕ ಹಾಗೂ ಸಮಗ್ರ ಯೋಗ ಮತ್ತು ನೈಸರ್ಗಿಕ ಚಿಕಿತ್ಸೆಯ ಮೂಲಕ ನಿಯಂತ್ರಿಸುವುದು. ಕಾರ್ಯಕ್ರಮದಲ್ಲಿ ಚಿಕಿತ್ಸಾ ಆಹಾರ ಪದ್ಧತಿ, ಯೋಗಾಭ್ಯಾಸ, ಜಲಚಿಕಿತ್ಸೆ, ಮಣ್ಣು ಚಿಕಿತ್ಸೆ, ಉಪವಾಸ ಚಿಕಿತ್ಸೆ ಹಾಗೂ ಜೀವನಶೈಲಿ ಪರಿವರ್ತನೆ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.


ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಅವರು ಸಾಧಕರನ್ನು ಉದ್ದೇಶಿಸಿ ಮಾತನಾಡಿ, ಅತಿಸ್ಥೂಲ ನಿಯಂತ್ರಣ ಚಿಕಿತ್ಸಾ ಶಿಬಿರಕ್ಕೆ ಮಾಹಿತಿಯನ್ನು ನೀಡಿದರು. ಸ್ಥಾನಿಕ ವೈದ್ಯಾಧಿಕಾರಿ ಡಾ. ಬಿಂದು ಶ್ರೀಧರ್ ಅವರು ಕಾರ್ಯಕ್ರಮದ ಚಿಕಿತ್ಸಾ ಕ್ರಮಗಳ ಕುರಿತು ಸಂಕ್ಷಿಪ್ತ ವಿವರಣೆ ನೀಡಿದರು.
ಕಾರ್ಯಕ್ರಮವನ್ನು ಆಹಾರ ಮತ್ತು ಪೋಷಣಾ ವಿಭಾಗದ ಪ್ರಾಧ್ಯಾಪಕಿ ಹಾಗೂ ಡೀನ್ ಡಾ. ಗೀತಾ ಬಿ. ಶೆಟ್ಟಿ ಅವರು ಸಂಯೋಜಿಸಿದ್ದು.ಕಾರ್ಯಕ್ರಮದ ನಿರೂಪಣೆಯನ್ನು ಪ್ರಥಮ ವರ್ಷದ ಎಂ.ಡಿ (ಡಯಟ್ ಅಂಡ್ ನ್ಯೂಟ್ರಿಷನ್) ವಿದ್ಯಾರ್ಥಿನಿ ಡಾ. ಭಾಷಿಣಿ ಅವರು ನೆರವೇರಿಸಿದರು. ಈ ವಾರಪೂರ್ತಿ ಕಾರ್ಯಕ್ರಮದಲ್ಲಿ ಪ್ರಾಯೋಗಿಕ ತರಗತಿಗಳು, ತಜ್ಞರ ಉಪನ್ಯಾಸಗಳು, ನೈಸರ್ಗಿಕ ಚಿಕಿತ್ಸೆಗಳು ಹಾಗೂ ವೈಯಕ್ತಿಕ ಆಹಾರ ಸಲಹೆಗಳು ನಡೆಯಲಿವೆ.









