






ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 1 ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವ ಬಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕಡಿರುದ್ಯಾವರ ಗ್ರಾಮದ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯು ಫೆ.14 ರಂದು ನಡೆಯಿತು.


ಮನೆಯ ಯಜಮಾನರಾದ ಅಶೋಕ ಕುಮಾರ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಜಾತ್ರೋತ್ಸವಕ್ಕೆ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿ ಸದಸ್ಯರೂ,ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಪ್ರಸ್ತಾವಿಕವಾಗಿ ಮಾತನಾಡುತ್ತಾ ಕ್ಷೇತ್ರ ನಡೆದು ಬಂದ ಹಾದಿಯನ್ನು ವಿವರಿಸಿ ಜಾತ್ರಾ ಮಹೋತ್ಸವವನ್ನು ಯಶಸ್ಸು ಗಳಿಸುವ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ಗ್ರಾಮದ ಭಕ್ತಾಭಿಮಾನಿಗಳನ್ನು ಶ್ರೀ ಕ್ಷೇತ್ರಕ್ಕೆ ಆಹ್ವಾನಿಸಿದರು.

ಕಾರ್ಯಕ್ರಮದಲ್ಲಿ ಪುರುಷೋತ್ತಮ್, ಸುಂದರ ಪೂಜಾರಿ, ಕೇಶವ ಪೂಜಾರಿ, ಲಕ್ಷ್ಮಣ ಪೂಜಾರಿ, ಪ್ರವೀಣ ಪೂಜಾರಿ, ಪ್ರಶಾಂತಿ ಅಶೋಕ್ ಪೂಜಾರಿ, ಮನೀಶ್,ಮಾನ್ಯ ಯಶಸ್ ಪೂಜಾರಿ ಧ್ಯಾನೇಶ್ ಮುಂತಾದವರು ಹಾಜರಿದ್ದರು ಕಾರ್ಯಕ್ರಮವನ್ನು ಲಾಯಿಲ ವಲಯ ಸಂಚಾಲಕರಾದ ಚಂದ್ರಶೇಖರ್ ಇಂದಬೆಟ್ಟು ಸಂಯೋಜಿಸಿ ಉಪಸ್ಥಿತರಿದ್ದರು









