ನೇತ್ರಾವತಿ ಮಣ್ಣ ಸಂಕದ ಬಳಿ ಭೀಕರ ರಸ್ತೆ ಅಪಘಾತ

0

ಧರ್ಮಸ್ಥಳ: ಇಲ್ಲಿನ ನೇತ್ರಾವತಿ ಮಣ್ಣ ಸಂಕದ ಬಳಿ ಬಸ್, ಬೈಕ್, ಕಾರು, ನಡುವೆ ಭೀಕರ ರಸ್ತೆ ಅಪಘಾತವಾದ ಘಟನೆ ಫೆ.17 ರಂದು ನಡೆದಿದೆ.

ಸ್ಟೇಟ್ ಬ್ಯಾಂಕ್ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಬಸ್ ಹಾಗೂ ಧರ್ಮಸ್ಥಳ ಕಡೆಯಿಂದ ಮಂಗಳೂರಿಗೆ ಹೋಗುವ ಕಾರು ಉಜಿರೆಯಿಂದ ಬರುತ್ತಿದ್ದ ಬೈಕ್ ಪಾಂಗಳ ಕಡೆಗೆ ತಿರುಗಿಸುವ ವೇಳೆಯಲ್ಲಿ ಹಿಂದೆಯಿಂದ ಬರುತ್ತಿದ್ದ ಬಸ್ ಚಾಲಕನ ನಿರ್ಲಕ್ಷದಿಂದ ಬೈಕ್ ಹಾಗೂ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಗಿದೆ ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಕೊಲಂಗಾಜೆ ನಿವಾಸಿ ಕರಿಯಪ್ಪ ಗೌಡರಿಗೆ ಗಂಭೀರ ಗಾಯವಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

LEAVE A REPLY

Please enter your comment!
Please enter your name here