






ಉಜಿರೆ: ಮಲೆಬೆಟ್ಟು ಶ್ರೀ ಮಹಾಗಣಪತಿ ದೇವಸ್ಥಾನ ಮತ್ತು ಉದ್ಭವ ಶ್ರೀ ಸುಬ್ರಹ್ಮಣ್ಯಶ್ವರ ದೇವಸ್ಥಾನದಲ್ಲಿ ಫೆ. 12 ರಂದು ಪ್ರತಿಷ್ಠಾ ವರ್ಧ0ತಿ ಮತ್ತು ವಾರ್ಷಿಕ ಜಾತ್ರೆ ನೀಲೇಶ್ವರ ಅಲಂಬಾಡಿ ಪದ್ಮನಾಭಾ ತಂತ್ರಿ ಗಳ ನೇತೃತ್ವದಲ್ಲಿ ಉಜಿರೆ ಶರತ್ ಕೃಷ್ಣ ಪಡುವೆಟ್ನಾಯರ ಮಾರ್ಗದರ್ಶನದಲ್ಲಿ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆಡೆಯಿತು.



ಬೆಳಿಗ್ಗೆ ಶ್ರೀ ಮಹಾಗಣಪತಿ ದೇವರ ಸನ್ನಿಧಿ ಯಲ್ಲಿ ಪ್ರಾರ್ಥನೆ, ತೋರಣ ಮುಹೂರ್ತ, ಗಣಪತಿ ಹೋಮ, ಬಿಂಬ ಶುದ್ಧಿ, ಪುಣ್ಯಾಹ ಕಲಶ, ಕಲಶ ಪೂಜೆ, ಕಲಾಶಾಭಿಷೇಕ, ಭಜನೆ ನೆರವೇರಿತು.ಶ್ರೀ ಸುಬ್ರಹ್ಮಣ್ಯ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ತೋರಣ ಮುಹೂರ್ತ, ಬಿಂಬ ಶುದ್ದಿ, ಕಲಶಾಭಿ ಷೇಕ, ಸಿಯಾಳಾಭಿಷೇಕ, ಕ್ಷಿರಾಷೇಕ, ಪಾಂಚಾಮೃತ ಅಭಿಷೇಕ, ಕಾರ್ತಿಕ ಪೂಜೆ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು.ಸಂಜೆ ಗ ಕುಣಿತಾ ಭಜನಾ ಕಾರ್ಯಕ್ರಮ, ಕಾಳರಾತ್ರಿ ದೈವದ ಪರ್ವ, ಭಂಡಾರ ಆಗಮನ, ರಾತ್ರಿ ರಂಗ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಬಳಿಕ ತುಳುವೆರೆ ಉಡಲ್ ಜೋಡುಕಲ್ಲು ಇವರಿಂದ ತುಳು ಸಾಮಾಜಿಕ ಹಾಸ್ಯಮಯ ನಾಟಿಕ “ಡೆನ್ನ ಡೆನ್ನಾನ” ಪ್ರದರ್ಶನ ಗೊಂಡಿತು.ರಾತ್ರಿ ಕಾಳರಾತ್ರಿ ದೈವದ ನೇಮ ನಡೆಯಿತು.ಊರ, ಪರ ಊರ ಭಕ್ತರು, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ, ಜಾತ್ರಾ ಸಮಿತಿ, ಭಜನಾ ಮಂಡಳಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಊರವರು ಯಶಸ್ವಿಗೆ ಸಹಕರಿಸಿದರು.









