ಗುರುವಾಯನಕೆರೆ: ಶ್ರೀ. ಕ್ಷೇ.ಧ.ಗ್ರಾ.ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಸಾರಿ ಗೊಂಡೆ ತರಬೇತಿ ಕಾರ್ಯಕ್ರಮ

0

ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಬಿಸಿ ಟ್ರಸ್ಟ ಗುರುವಾಯನಕೆರೆ ತಾಲೂಕಿನ ನಾರಾವಿ ವಲಯದಲ್ಲಿ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ಸಾರಿಗೆ ಗೊಂಡೆ ತರಭೇತಿಯನ್ನು ನಾರಾವಿ ವಲಯದ ಕುತ್ಲೂರು ಕಾರ್ಯಕ್ಷೇತ್ರದಲ್ಲಿ CRE ತರಭೇತಿ ಕೇಂದ್ರದ ಪ್ರಾಂಶುಪಾಲರು ರಮೇಶ್ ಉದ್ಘಾಟನೆ ಮಾಡಿ ತರಭೇತಿ ಕೇಂದ್ರ ದ ಸೌಲಭ್ಯ ದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಕುತ್ಲೂರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಕನಕವರ್ಮ ಜೈನ್ , ಭಜನಾ ಮಂಡಳಿ ಅಧ್ಯಕ್ಷರು ಅಣ್ಣಿ ಎಂ.ಕೆ ಕುತ್ಲೂರು ಒಕ್ಕೂಟದ ಅಧ್ಯಕ್ಷರು ಸಂತೋಷ ಕಾಂತಬೆಟ್ಟು ಉಪಸ್ಥಿತರಿದ್ದರು. 5 ದಿನ ದ ಈ ತರಬೇತಿ ನೀಡಲಿರುವ ತರಭೇತಿ ಶಿಕ್ಷಕಿಯಾಗಿ ಜಯಪ್ರದಾ ಕೊಕ್ರಾಡಿ ಅವರು ಕೂಡ ಉಪಸ್ಥಿತರಿದ್ದರು.5 ದಿನದ ಉಚಿತ ತರಬೇತಿ ಪಡೆಯಲು 35 ಮಂದಿ ಅಭ್ಯರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here