







ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆಶ್ರಯದಲ್ಲಿ ಕನ್ಯಾಡಿಯ ಯಕ್ಷಭಾರತಿ( ರಿ )ಯ 11 ನೇ ವಾರ್ಷಿಕ ಸಂಭ್ರಮ (ಭಾರತ ಮಾತಾ ಪೂಜನ, ಯಕ್ಷಭಾರತಿ ಪ್ರಶಸ್ತಿ , ಸೇವಾ ಗೌರವ, ವಿದ್ಯಾರ್ಥಿವೇತನ, ಯಕ್ಷಗಾನ ಪ್ರದರ್ಶನ) ಮಾ. 7 ಶನಿವಾರ ಅಪರಾಹ್ನ 4.30 ರಿಂದ ಉಜಿರೆ ಶ್ರೀ ಜನಾರ್ದನ ದೇವಸ್ಥಾನದ” ಶ್ರೀ ಕೃಷ್ಣಾನುಗ್ರಹ” ಸಭಾಭವನದಲ್ಲಿ ನಡೆಯಲಿದೆ.


ಸಂಜೆ 4.30ಕ್ಕೆ”ಭಾರತ ಮಾತಾ ಪೂಜನ” ಮೂಲಕ ಪ್ರಾರಂಭಗೊಳ್ಳುವ ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮೂಡಬಿದ್ರಿಯ ಉದ್ಯಮಿ ಶ್ರೀಪತಿ ಭಟ್ ಅವರಿಗೆ ಈ ಸಾಲಿನ ಯಕ್ಷಭಾರತಿ ಪ್ರಶಸ್ತಿ, ಬೆಳ್ತಂಗಡಿಯ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಸಂಪತ್ ಸುವರ್ಣ ಅವರಿಗೆ ಯಕ್ಷಭಾರತಿ ಯುವ ಸೇವಾ ಗೌರವ,ಗುರುವಾಯನಕೆರೆಯ ವೈದ್ಯ ಡಾ|ವೇಣುಗೋಪಾಲ ಶರ್ಮ ಅವರಿಗೆ ಯಕ್ಷಭಾರತಿ ಅರೋಗ್ಯ ಸೇವಾ ಗೌರವ , ಸಾಂಸ್ಕೃತಿಕ ಪ್ರತಿಭೆ,ನಿವೃತ್ತ ಶಿಕ್ಷಕ ಉಜಿರೆಯ ಮುರಳಿಕೃಷ್ಣ ಆಚಾರ್ ಅವರಿಗೆ ಯಕ್ಷಭಾರತಿ ಶಿಕ್ಷಣ ಸೇವಾ ಗೌರವ, ಉಜಿರೆಯ ಸಮಾಜ ಸೇವಾ ಸಂಸ್ಥೆ ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಯಕ್ಷಭಾರತಿ ಸೇವಾ ತಂಡ ಗೌರವ ಪ್ರದಾನ ಮಾಡಲಾಗುವುದು. ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗು ವಿದ್ಯಾ ನಿಧಿ ವಿತರಿಸಲಾಗುವುದು. ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಮತ್ತು ವಿ.ಪ.ಶಾಸಕ ಪ್ರತಾಪಸಿಂಹ ನಾಯಕ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿರುವರು.
ಯಕ್ಷಗಾನದ ಖ್ಯಾತ ಕಲಾವಿದರು ಹಾಗು ಯಕ್ಷಭಾರತಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ “ಲೀಲಾ ಮೂರ್ತಿ ಶ್ರೀ ಜನಾರ್ದನ “ಪ್ರಸಂಗದ ಯಕ್ಷಗಾನ ಬಯಲಾಟ ಪ್ರದರ್ಶಿಸಲ್ಪಡಲಿದೆ ಎಂದು ಯಕ್ಷಭಾರತಿ ಸಂಚಾಲಕ ಮಹೇಶ್ ಕನ್ಯಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








