ಉಜಿರೆ: ರೈತರಿಗೆ ಮೊಟ್ಟೆ ಕೋಳಿ ಸಾಕಾಣಿಕೆ ತರಬೇತಿ

0

ಉಜಿರೆ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ, ಕೃಷಿ ಇಲಾಖೆ ಹಾಗೂ ಪ್ರೇರಣಾ ಸಂಜೀವಿನಿ ಒಕ್ಕೂಟ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಉಜಿರೆ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ರಾಷ್ಟೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಮೊಟ್ಟೆ ಕೋಳಿ ಸಾಕಾಣಿಕೆ ತರಬೇತಿಯು ಫೆ.9 ರಂದು ನಡೆಯಿತು.

ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಷಾ ಕಿರಣ್ ಕಾರಂತ್ ದೀಪ ಪ್ರಜ್ವಲಿಸಿ , ಕೃಷಿ ಕರು ರೈತರು ಮಹಿಳೆ ಯರು ಸರಕಾರ ದ ಯೋಜನೆ ಗಳಲ್ಲಿ ತೊಡಗಿಸಿ ಕೊಳ್ಳಲು ಉಜಿರೆ ಗ್ರಾಮ ಪಂಚಾಯತ್ ನಿಂದ ಬೇಕಾದ ಎಲ್ಲಾ ಸಹಕಾರವನ್ನು ನೀಡುವುದಾಗಿ ಬೆಂಬಲ ವ್ಯಕ್ತ ಪಡಿಸಿ ಶುಭ ಹಾರೈಸಿದರು. ಪಶು ಸಂಗೋಪನ ಇಲಾಖೆಯ ನೆರಿಯ ಪಶು ವೈದ್ಯಾಧಕಾರಿ ಡಾ ಯತೀಶ್ ಇವರು ಪಿ. ಪಿ. ಟಿ ಮೂಲಕ ಕೋಳಿ ಗಳ ವಿವಿಧ ತಳಿಗಳು, ರೋಗ ಬಾಧೆ,ಹಾಗೂ ನಿರ್ವಹಣೆ, ಕೋಳಿ ಮನೆ ಮಾದರಿ,ಬಗ್ಗೆ ಪರಿಣಾಮಕಾರಿ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿ ಮೊಟ್ಟೆ ಕೋಳಿ ಸಾಕಾಣಿಕೆದಾರರಾದ ಪ್ರಗತಿ ಪರ ಕೃಷಿಕ ಬಿಜು ತೋಮಸ್ ಇವರು ತಮ್ಮ ಅನುಭವಯುಕ್ತ ಮಾಹಿತಿ ನೀಡಿದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಅಧಿಕಾರಿ ಗಣೇಶ್ ಇವರು ಪಶು ಸಂಗೋಪನ ಇಲಾಖೆ ಮತ್ತು ಕೃಷಿ ಇಲಾಖೆ ಯು ಜೊತೆಯಾಗಿ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದು ರೈತರು ಹಾಗೂ ಮಹಿಳೆಯರು ಇಲಾಖೆ ಯ ಯೋಜನೆಗಳನ್ನು ಬಳಸಿ ಕೊಂಡು ಮಾದರಿ ಕೃಷಿ ಮಾಡುವಂತೆ ಶುಭ ಹಾರೈಸಿದರು. ಉಜಿರೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರವಣ್ ಕುಮಾರ್ ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷೆ ವಿನುತ ರಜತ್ ಗೌಡ ವಹಿಸಿ NRLM ಯೋಜನೆ ಯಿಂದ ಕುಕ್ಕುಟ ಸಂಜೀವಿನಿ ಯೋಜನೆ ಗೆ ಸರಕಾರದಿಂದ ದೊರೆಯುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು. ಕೃಷಿ ಸಖಿ ಭಾಗೀರಥಿ ಪ್ರಸ್ತಾವನೆಗೈದು, ಒಕ್ಕೂಟದ ಪದಾಧಿಕಾರಿಯಾದ ಸುನಂದಾ ಇವರು ಸ್ವಾಗತಿಸಿದರು ಬೆಳಾಲು ಇಂದಬೆಟ್ಟು ವಿನ ಕೃಷಿ ಸಖಿ ಪಶು ಸಖಿ.LCRP ಸಹಕರಿಸಿ ದರು. ಏಕಲತಾ ವಂದಿಸಿದರು.

LEAVE A REPLY

Please enter your comment!
Please enter your name here