ಎಲ್ಲಿ ಮುಗ್ಧತೆ ಇರುತ್ತದೆ ಅಲ್ಲಿ ದೈವ ದೇವರು ಇರುತ್ತಾರೆ: ಲಕ್ಷ್ಮೀಶ ಭಟ್ ಗಬಲಡ್ಕ-ಪುದುವೆಟ್ಟು ಮಿಯ್ಯಾರು ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

0

ಪುದುವೆಟ್ಟು: ವನದುರ್ಗೆ ಎಂದರೆ ಕಾಡಿನಲ್ಲಿ ಇರುವ ದುರ್ಗೆ ಎಂದು ಹೇಳಬಹುದು. ಇಲ್ಲಿರುವ ಭಕ್ತರನ್ನು ಆಡಳಿತ ಸಮಿತಿಯನ್ನು ನೋಡುವಾಗ ಮುಗ್ಧತೆಯನ್ನು ಕಾಣಬಹುದು ಎಲ್ಲಿ ಮುಗ್ಧತೆ ಇರುತ್ತದೆಯೋ ಅಲ್ಲಿ ಭಗವಂತ, ದೈವತ್ವ ಇರುತ್ತದೆ ಎಂದು ದ. ಕ. ಜಿಲ್ಲೆ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಭಟ್ ಗಬಲಡ್ಕ ಹೇಳಿದರು.ಅವರು ಪುದುವೆಟ್ಟು ಗ್ರಾಮದ ಮಿಯ್ಯಾರು ವನದುರ್ಗಾಪರಮೇಶ್ವರೀ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವದ ಧಾರ್ಮಿಕ ಪ್ರವಚನದಲ್ಲಿ ಮಾತನಾಡಿ ಮಕ್ಕಳಲ್ಲಿ ನಾವು ದೇವರನ್ನು ಕಾಣುತ್ತೇವೆ ಯಾಕೆಂದರೆ ಅಲ್ಲಿ ಮುಗ್ಧತೆ ಇರುತ್ತದೆ. ಇಲ್ಲಿ ತುಂಬಾ ಮುಗ್ಧ ಹೃದಯಗಳು ಒಟ್ಟು ಸೇರಿದ್ದೀರಿ. ನಿಮ್ಮಲ್ಲಿ ಏನು ವಿಚಾರವನ್ನು ಮಾತನಾಡಬೇಕು ಎಂದು ತಿಳಿಯುವುದಿಲ್ಲ ಮುಗ್ಧರಲ್ಲಿ ಯಾವುದೇ ತಪ್ಪುಗಳು ಆಗುವುದಿಲ್ಲ ಎಂದರು.

ಸಿಟಿಡಿ ಮಣ್ಣಗುಂಡಿ ಉಪ ವಲಯ ಅರಣ್ಯಾಧಿಕಾರಿ ಎಂ ಯತೀಂದ್ರ ಕುಮಾರ್ ಹಾಗೂ ವಾಣಿ ಪದವಿಪೂರ್ವ ಕಾಲೇಜ್ ನಿವೃತ್ತ ಪ್ರಾಶಪಾಲ ಯದುಪತಿ ಗೌಡ ಇವರ ಕುಟುಂಬ ಸಮೇತರನ್ನು ಸನ್ಮಾನಿಸಲಾಯಿತು.ಸತ್ಯನಾರಾಯಣ ಪೂಜೆ ಮತ್ತು ರಂಗಪೂಜೆ ಫೆ.7 ಮತ್ತು 8ರಂದು ನಡೆಯಿತು.

ಫೆ.7ರಂದು ಬೆಳಿಗ್ಗೆ 8ರಿಂದ ಹೊರಕಾಣಿಕೆ ಸಮರ್ಪಣೆ, ಮಧ್ಯಾಹ್ನ 12 ಗಂಟೆಗೆ ಶ್ರೀ ವನದುರ್ಗಾ ದೇವಿಯ ಮಹಾಪೂಜೆ ಪ್ರಸಾದ ವಿತರಣೆ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು. ಸಂಜೆ 6ಕ್ಕೆ ಹಿಪ್-ಬಾಯ್ ನೃತ್ಯ ತಂಡ ಉಜಿರೆ ಇವರಿಂದ ನೃತ್ಯ ಕಾರ್ಯಕ್ರಮ, ರಾತ್ರಿ 7 ರಿಂದ ರಾತ್ರಿ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 9 ರಿಂದ ಅಪ್ಪೆ ಭ್ರಾಹ್ಮರಿ ನಾಟಕ ನಡೆಯಿತು.

ಫೆ.8 ರಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಲಘು ಉಪಾಹಾರ, ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ರಾತ್ರಿ 9ರಿಂದ ಭಜನಾ ಗುರುಗಳಾದ ನಾಗೇಶ್ ಬಿ ನೆರಿಯ ಇವರ ಸಾರಥ್ಯದಲ್ಲಿ ‘ಭಜನಾ ಕಮ್ಮಟೋತ್ಸವ ಕಾರ್ಯಕ್ರಮ ನಡೆಯಿತು.

ವೇದಿಕೆಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬೊಮ್ಮಣ್ಣ ಗೌಡ ಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಬೆಳ್ತಂಗಡಿ ತಾಲೂಕು ಸೇವಾ ಭಾರತಿ ಅಧ್ಯಕ್ಷೆ ಸ್ವರ್ಣ ಗೌರಿ ಉದ್ಯಮಿ ನಾಗೇಶ್ ಗೌಡ, ಶ್ರೀ ಸೌತಡ್ಕ ಮಹಾಗಣಪತಿ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ, ಮಿಯ್ಯಾರು ವನದುರ್ಗಾ ದೇವಸ್ಥಾನದ ಅಧ್ಯಕ್ಷ ರಮೇಶ್ ಪ್ರಭು, ಡೆವೆಲಪ್ ಮೆಂಟ್ ಟ್ರಸ್ಟ್ ಅಧ್ಯಕ್ಷ ಶ್ರೀಪತಿ ಹೆಬ್ಬಾರ್, ವಾಣಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯದುಪತಿ ಗೌಡ, ಉಪ ವಲಯ ಅರಣ್ಯಾಧಿಕಾರಿ ಎಂ.ಯತೀಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ನಮಿತಾ ಕೆ. ಪೂಜಾರಿ, ರಮೇಶ್ ರಾವ್ ಮಂಜಿಲ್, ಪುದುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಪೂರ್ಣಾಕ್ಷ, ಪೂಜಾ ಸಮಿತಿಯ ಅಧ್ಯಕ್ಷ ಗುರುಪ್ರಸಾದ್, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಮೋಹಿನಿ ಧರ್ಮರಾಜ ಪೂಜಾರಿ ಉಪಸ್ಥಿತರಿದ್ದರು. ವೇದಿತ ತಂಡ ಪ್ರಾರ್ಥಿಸಿ, ಸುರೇಶ್ ಕೆ.ಆರ್ ಸ್ವಾಗತಿಸಿ, ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಸಂತೋಷ್ ಕೆ ಸಿ ವರದಿ ಮಂಡಿಸಿ, ಸಮೀಕ್ಷಾ ಶಿರ್ಲಾಲು ನಿರೂಪಿಸಿ, ಶಿಕ್ಷಕ ನಿಶಾಂತ್ ವಂದಿಸಿದರು.

LEAVE A REPLY

Please enter your comment!
Please enter your name here