







ಉಜಿರೆ: ಜಿಲ್ಲಾ ರೈತ ತರಬೇತಿ ಕೇಂದ್ರ ಬೆಳ್ತಂಗಡಿ, ಪ್ರೇರಣ ಮಹಿಳಾ ಸಂಜೀವಿನಿ ಒಕ್ಕೂಟ ಉಜಿರೆ, ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ಅಣಬೆ ಕೃಷಿ ಹಾಗೂ ಸಾವಯವ ಕೃಷಿ ತರಬೇತಿ ಕಾರ್ಯಾಗಾರ ಉಜಿರೆಯ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.



ಕಾರ್ಯಕ್ರಮದ ಉದ್ಘಾಟನೆಯನ್ನು ದೇವಸ್ಥಾನದ ಅರ್ಚಕ ಕೃಷ್ಣ ಹೊಳ್ಳ ನೆರವೇರಿಸಿ ಮಾತಾಡಿ ರೈತ ತರಬೇತಿ ಒಂದು ಬಹಳ ಉತ್ತಮವಾದ ಯೋಜನೆ ಇದರ ಸದುಪಯೋಗವನ್ನು ಎಲ್ಲಾ ರೈತರು ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು. ಪ್ರಸ್ತಾವಿಕವಾಗಿ ಮಾತಾಡಿದ ಕೃಷಿ ಸಖಿ ಭಾಗೀರಥಿ ರೈತ ತರಬೇತಿಯ ಉದ್ದೇಶಗಳು ಇಲಾಖೆಯ ವತಿಯಿಂದ ನಡೆಯುವ ವಿವಿಧ ತರಬೇತಿಗಳ ಬಗ್ಗೆ ಮಾಹಿತಿ ನೀಡಿದರು. ಪಶುಸಖಿ ಏಕಲತಾ ಪಶು ಇಲಾಖೆಯ ಮಾಹಿತಿಯನ್ನು ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಸುಲೇಮಾನ್ ಬೆಳಾಲು ಅಣಬೆ ಕೃಷಿ ಮಾಡುವ ವಿಧಾನಗಳು ಅದರ ಉದ್ದೇಶ ಅದರಿಂದ ನಮಗಾಗುವ ಲಾಭಗಳು ಎಲ್ಲವನ್ನು ಪ್ರಾತ್ಯಕ್ಷಿಕೆಯ ಮೂಲಕ ಬಂದ ಎಲ್ಲಾ ರೈತರಿಗೆ ಸವಿವರವಾಗಿ ತಿಳಿಸಿದರು. ಕೃಷಿ ಸಖಿ ಭಾಗೀರಥಿ ನೈಸರ್ಗಿಕ ಕೃಷಿಯ ಮಹತ್ವ ಮಣ್ಣಿನ ಮಹತ್ವ ಮಣ್ಣಿನ ಆರೋಗ್ಯ ಕಾಪಾಡುವುದು ಹೇಗೆ ರಾಸಾಯನಿಕ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳು ತಮ್ಮ ಕೃಷಿಯಲ್ಲಿ ನೈಸರ್ಗಿಕ ಪದ್ಧತಿಯನ್ನು ವೈಜ್ಞಾನಿಕ ವಿಧಾನದ ಮೂಲಕ ಹೇಗೆ ಅಳವಡಿಸಿಕೊಳ್ಳಬೇಕು ಎಂದು ಜೀವಾಮೃತವನ್ನು ಸವಿವರವಾಗಿ ತಿಳಿಸಿ ಮಾಡುವ ವಿಧಾನವನ್ನು ವಾತ್ಯಕ್ಷಿಕೆಯ ಮೂಲಕ ರೈತರಿಗೆ ತಿಳಿಸಿದರು. ಮತ್ತು ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಶಿಕ್ಷಕಿ ಸೇವಂತಿ ನಿರಂಜನ್ ಸ್ವಾಗತಿಸಿ ಶಿಕ್ಷಕಿ ರಾಜೇಶ್ವರಿ ಚಂದ್ರಕಾಂತ್ ವಂದಿಸಿದರು.









