







ಅರಸಿನಮಕ್ಕಿ: ಫಲಸ್ತಡ್ಕ ನಿವಾಸಿ ಕಿಶೋರ್ ಗೌಡ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ ನೀಡಿ ಅರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆಗೆ ನೆರವಾಗುವ ಭರವಸೆ ವ್ಯಕ್ತಪಡಿಸಿದರು. ಕಿಶೋರ್ ಗೌಡ ಮತ್ತು ಅವರ ತಾಯಿ ಮಾತ್ರ ಮನೆಯಲ್ಲಿ ವಾಸವಿದ್ದು ಮಗನ ಅಸೌಖ್ಯ ತಾಯಿಗೆ ತೀವ್ರ ದುಃಖ ಉಂಟುಮಾಡಿದ್ದು ಚಿಕಿತ್ಸೆಯ ವೆಚ್ಚ ಭರಿಸುವುದಾಗಿ ಕಿಶೋರ್ ತಾಯಿಗೆ ಶಾಸಕರು ತಿಳಿಸಿದ್ದರಿಂದ ಕೊಂಚ ಸಮಾಧಾನ ವ್ಯಕ್ತ ಪಡಿಸಿದರು.


ಬಿಜೆಪಿ ಧರ್ಮಸ್ಥಳ ಶಕ್ತಿ ಕೇಂದ್ರ ಕಾರ್ಯದರ್ಶಿ ಗಣೇಶ್ ಗೌಡ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್., ಪಂಚಾಯತ್ ಸದಸ್ಯರಾದ ಪ್ರೇಮಚಂದ್ರ, ಬಿಜೆಪಿ ಮುಖಂಡರಾದ ವೃಶಾಂಕ್ ಖಾಡಿಲ್ಕರ್, ಜಯಪ್ರಕಾಶ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.









