







ಅರಸಿನಮಕ್ಕಿ :ಪಂಚಾಯತ್ ಸ್ವಂತ ನಿಧಿಯಿಂದ ಪರಿಶಿಷ್ಟ ಜಾತಿ-ಪಂಗಡಕ್ಕೆ ನೀರಿನ ಟ್ಯಾಂಕ್ ಮತ್ತು ವಿಕಲಚೇತನರಿಗೆ ವೀಲ್ ಚೇರ್ ವಿತರಣೆ ಕಾರ್ಯಕ್ರಮ ಶಾಸಕ ಹರೀಶ್ ಪೂಂಜ ಸಮ್ಮುಖದಲ್ಲಿ ಫೆ. 7ರಂದು ಹತ್ಯಡ್ಕ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ವೇದಿಕೆಯಲ್ಲಿ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ ಎಸ್, ಪಂಚಾಯತ್ ಸದಸ್ಯರಾದ, ಪ್ರೇಮಚಂದ್ರ, ಜನಾರ್ಧನ, ಲಾವಣ್ಯ, ಪುಷ್ಪಾ ಉಪಸ್ಥಿತರಿದ್ದರು.ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ. ಎಸ್ ಸ್ವಾಗತಿಸಿ, ಪಿ ಡಿ ಓ ರಾಘವೇಂದ್ರ ಧನ್ಯವಾದವಿತ್ತರು.ಪಂಚಾಯತ್ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ಸಹಕರಿಸಿದರು.











