






ನಡ: ಗ್ರಾಮ ಪಂಚಾಯತ್ ನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.5ರಂದು ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ರವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಸಮಾಜ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು. ಕುಕ್ಕಿನಕಟ್ಟೆ ಪಡ್ಡು ಎಂಬಲ್ಲಿ ಸುಮಾರು ವರ್ಷಗಳಿಂದ ಇರುವ ಸಾರ್ವಜನಿಕ ದೈವಸ್ಥಾನದ ಅಭಿವೃದ್ಧಿಗೆ ತಡೆಯೊಡ್ಡುವ ಕೆಲಸ ಸ್ಥಳೀಯ ವ್ಯಕ್ತಿ ಮಾಡುತಿದ್ದಾರೆ. ಈಗಾಗಲೇ ಅವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಪಂಚಾಯತ್ ರಸ್ತೆ ನಿರ್ಮಾಣಕ್ಕೂ ನ್ಯಾಯಲಯದಿಂದ ತಡೆಯೊಡ್ಡುತಿದ್ದಾರೆ. ತಕ್ಷಣ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ ಘಟನೆ ನಡ ಗ್ರಾಮ ಸಭೆಯಲ್ಲಿ ನಡೆಯಿತು. ಅವರ ಜಾಗದ ವಿವರಗಳನ್ನು ತಕ್ಷಣ ಕಂದಾಯ ಇಲಾಖೆ ಪರಿಶೀಲಿಸಿ ಸರ್ವೇ ನಡೆಸಬೇಕು, ಒಂದು ವೇಳೆ ಸರ್ಕಾರಿ ಜಾಗ ಒತ್ತುವರಿ ಆಗಿದ್ದರೆ ಕಂದಾಯ ಇಲಾಖೆ ವಶಕ್ಕೆ ತಗೊಳ್ಳುವಂತೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದರು.


ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ದಿವಾಕರ, ಸದಸ್ಯರಾದ ಎನ್.ಬಿ. ಹರಿಶ್ಚಂದ್ರ, ಎ ವಿಜಯ ಗೌಡ, ಸುಕೇಶ್, ಪ್ರವೀಣ್ ವಿ.ಜೆ., ಜಯ ಶೆಟ್ಟಿ, ಲಲಿತ, ಸುಶೀಲ, ಸುಮಿತ್ರ, ಶಶಿಕಲಾ, ವಿನುತಾ, ಮಮತಾ, ಚಂದ್ರಹಾಸ ಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಕಿರಣ್ ಅನುಪಾಲನ ವರದಿ ವಾಚಿಸಿ, ಸಿಬ್ಬಂದಿ ಭಾರತಿ ಜಮಾಖರ್ಚು ಮಂಡಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ ಕೆ. ಸ್ವಾಗತಿಸಿದರು. ಸಿಬ್ಬಂದಿ ಮೀನಾಕ್ಷಿ ನಿರೂಪಿಸಿದರು.









