






ಬೆಳಾಲು: ಇಲ್ಲಿನ ಗ್ರಾ.ಪಂ ಸಿಬ್ಬಂದಿ ಶಶಿಧರ್ ಎಂಬುವವರು ಗ್ರಾಮಸ್ಥರು ನೀಡಿದ್ದ ಒಟ್ಟು ರೂ.20,807 ಮನೆ ತೆರಿಗೆ ಹಾಗೂ ರೂ 31,415 ನೀರಿನ ಕರ ಪಾವತಿ ಮಾಡದೆ ಸರ್ಕಾರದ ಹಣ ದುರುಪಯೋಗ ಮಾಡಿರುವ ಘಟನೆ ಲೆಕ್ಕಪರಿಶೋಧನೆ ವೇಳೆ ತಡವಾಗಿ ಬೆಳಕಿಗೆ ಬಂದಿದೆ.


ಡಿ.9 ರಂದು ಮುಖ್ಯ ಲೆಕ್ಕಾಧಿಕಾರಿ ಪರಿಶೀಲನೆ ನಡೆಸಿದ್ದ ವೇಳೆ ತೆರಿಗೆ ಹಣ ಕಟ್ಟದೆ ದುರುಪಯೋಗ ಪಡಿಸಿರುವುದು ತಿಳಿದು ಬಂದಿದ್ದು, ತಕ್ಷಣವೇ ಹಣ ವಸೂಲಿ ಮಾಡಲಾಗಿದೆ. ಈಗಾಗಲೇ ಶಶಿಧರ್ ಅವರಿಗೆ ಎಚ್ಚರಿಕೆ ನೋಟೀಸ್ ನೀಡಲಾಗಿದ್ದು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಕಾರ್ಯನಿರ್ವಾಹಣಾಧಿಕಾರಿ ಭವಾನಿ ಶಂಕರ್ ತಿಳಿಸಿದ್ದಾರೆ.









