








ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣದಿಂದ ಧರ್ಮಸ್ಥಳ ಕ್ಷೇತ್ರದವರನ್ನು ಸಂತ್ರಸ್ತರೆಂದು ಪರಿಗಣಿಸಬೇಕೆಂದು ಧರ್ಮಸ್ಥಳ ಕ್ಷೇತ್ರದ ಪರ ವಕೀಲ ರಾಜಶೇಖರ್ ಹಿಲಿಯಾರ್ ಅರ್ಜಿಗೆ ತಿಮರೋಡಿ ಪರ ವಕೀಲ ವಿಜಯ ವಾಸು ಪೂಜಾರಿಯವರು ಆಕ್ಷೇಪಣೆ ಸಲ್ಲಿಸಿದ್ದು, ಸರ್ಕಾರಿ ವಕೀಲ ಎರಡೂ ಅರ್ಜಿಗಳಿಗೂ ತಕರಾರು ಸಲ್ಲಿಸಿದ್ದು, ಫೆ.5ರಂದು ಬೆಳ್ತಂಗಡಿ ಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ. ಧರ್ಮಸ್ಥಳದ ಪರ ಹಿರಿಯ ವಕೀಲ ಸಿ.ವಿ ನಾಗೇಶ್, ರಾಜಶೇಖರ್ ಹಿಲಿಯಾರ್, ಮಹೇಶ್ ಕಜೆ ಹಾಗೂ ತಿಮರೋಡಿ ಪರ ವಿಜಯವಾಸು ಪೂಜಾರಿ ವಾದ ಮಂಡಿಸಲಿದ್ದು ಈಗಾಗಲೇ ಕೋರ್ಟ್ ಗೆ ಆಗಮಿಸಿದ್ದಾರೆ. ಪ್ರಕರಣದ ಆರೋಪಿ ಚಿನ್ನಯ್ಯ ಕೂಡ ಕೋರ್ಟ್ ಗೆ ಆಗಮಿಸಿದ್ದಾರೆ.









