






ಬೆಳ್ತಂಗಡಿ: ಗೇರುಕಟ್ಟೆ ಪೇಟೆ ಸಮೀಪದ ಕಳಿಯ ಗ್ರಾಮದ ಕುಳಾಯಿ ಎಂಬಲ್ಲಿ ಚಿರತೆಯ ಸಂಚರಿಸುತ್ತಿದ್ದು ಫೆ.2 ರಂದು ರಾತ್ರಿ ಉಬರಡ್ಕ ಎಂಬ ಪ್ರದೇಶದಲ್ಲಿ ಬೋನ್ ಅಳವಡಿಸಿದ್ದಾರೆ.



ಫೆ.2 ರಂದು ಉಬರಡ್ಕ ಮನೆ ನಿವಾಸಿ ಪ್ರವೀಣ್ ಗೌಡ ತನ್ನ ರಬ್ಬರ್ ತೋಟದಲ್ಲಿ ಬೆಳಿಗ್ಗೆ 5 ರ ಸಮಯದಲ್ಲಿ ಟ್ಯಾಪಿಂಗ್ ಕೆಲಸವನ್ನು ಮಾಡುತ್ತಿರುವಾಗ ಚಿರತೆಯೊಂದು ಓಡಾಡುವುದನ್ನು ಕಂಡಿರುವುದಾಗಿ ತಿಳಿಸಿದ್ದಾರೆ.ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಅವರಿಗೆ ಮಾಹಿತಿ ನೀಡಲಾಗಿದ್ದು, ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರು ಪರಿಶೀಲನೆ ನಡೆಸಿ ಚಿರತೆ ಬಂದಿರುವುದು ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.









