






ಕಲ್ಮಂಜ: ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಧ್ವಜ ಪ್ರತಿಷ್ಠಾ ಬ್ರಹ್ಮ ಕಲಶ ಮಹೋತ್ಸವ, ಪ್ರತಿಷ್ಠಾ ದಿನಾಚರಣೆ ವಾರ್ಷಿಕ ಜಾತ್ರೋತ್ಸವ, ರಥೋತ್ಸವ ಜ. 31ರಿಂದ ಫೆ. 6ರ ವರೆಗೆ ವೇದಮೂರ್ತಿ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆಯಲಿದ್ದು ಜ. 31 ರಂದು ಗಣಹೋಮ,ತೋರಣ ಮುಹೂರ್ತ, ಗ್ರಾಮಸ್ಥರಿಂದ ಹೊರೆ ಕಾಣಿಕೆ ಸಮರ್ಪಣೆ, ಉಗ್ರಾಣ ಮಹೂರ್ತ, ಶತರುದ್ರಾಭಿಷೇಕ, ಸಾರ್ವಜನಿಕ ಅನ್ನ ಸಂತರ್ಪಣೆ,ತಂತ್ರಿಗಳ ಆಗಮನ,ಸ್ವಾಗತ, ಸಮೂಹ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹ, ಅಂಕುರಾರೋಹಣ ಪ್ರಾಸದ ಶುದ್ಧಿ, ವಾಸ್ತು ಹೋಮ, ವಾಸ್ತು ಕಲಶ ಪೂಜೆ ಇನ್ನಿತರ ಕಾರ್ಯಕ್ರಮಗಳು ಜರಗಿದವು.



ಎಂ. ಅರ್ಚಕ ರಾಜೇಶ್ ಹೊಳ್ಳ,ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸುನಿಲ್ ಕನ್ಯಾಡಿ ಮತ್ತು ಪದಾಧಿಕಾರಿಗಳು, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ, ಸದಸ್ಯರು, ಊರ- ಪರ ಊರ ಭಕ್ತರು ಉಪಸ್ಥಿತರಿದ್ದರು. ಜಾತ್ರೋತ್ಸವ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃಕ ಕಾರ್ಯಕ್ರಮಗಳು ಜರಗಲಿವೆ.ಫೆ. 3 ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಫೆ. 5ರಂದು ಬೆಳಿಗ್ಗೆ ವೈದಿಕ ಕಾರ್ಯಗಳು, ಧ್ವಜ ಪ್ರತಿಷ್ಠೆ, ಸಂಜೆ ರಂಗಪೂಜೆ, ಶ್ರೀ ಭೂತ ಬಲಿ, ಬಲಿ ಉತ್ಸವ, ಪಾಲಕಿ ಬಲಿ ಉತ್ಸವ, ಪುಷ್ಪ ರಥೋತ್ಸವ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಫೆ. 3ರಂದು ರಂಗ ಕಲಾವಿದರು ಅಲೆತ್ತೂರು ಬಂಟ್ವಾಳ ಇವರು ಅಭಿನಯಿಸುವ ತುಳು ಹಾಸ್ಯ ಮಯ ನಾಟಕ “ನಮ್ಮನೇ ಇಲ್ಲ್” ಪ್ರದರ್ಶನ ಗೊಳ್ಳಲಿದೆ. ಫೆ. 4 ರಂದು ಸ್ಥಳೀಯಶಾಲಾ ವಿದ್ಯಾರ್ಥಿಗಳಿಂದ ಮತ್ತು ಊರವರಿಂದ ಸಾಂಸ್ಕೃಕ ವೈವಿದ್ಯ, ಫೆ. 5 ರಂದು ಮಂದಾರ ಕಲಾವಿದರು ಅಭಿನಯಿಸುವ ತುಳು ನಾಟಕ ಮಾಯೋದ ತುಡರ್, ಫೆ. 6 ರಂದು ಶ್ರೀ ಸತ್ಯ ನಾರಾಯಣ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ ನಿಡಿಗಲ್ ಇವರಿಂದ ಶಾಂಭವಿ ವಿಲಾಸ ಯಕ್ಷಗಾನ ನಡೆಯಲಿದೆ.









