






ಬೆಳ್ತಂಗಡಿ: ತಾಲೂಕಿನ ಗುರುವಾಯನಕೆರೆಯ ಹೃದಯ ಭಾಗದಲ್ಲಿ ಸರ್ವ ಸುಸಜ್ಜಿತವಾದ ಲ್ಯಾಬ್ ಹಾಗೂ ಇಸಿಜಿ ಹಾಗೂ ಎಲ್ಲಾ ತಜ್ಞ ವೈದ್ಯರ ಸೇವೆಯನ್ನು ಒಳಗೊಂಡ “Med.X ಪಾಲಿಕ್ಲಿನಿಕ್” ಉದ್ಘಾಟನೆ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಆಡಳಿತ ವ್ಯವಸ್ಥಾಪಕ ಸುಮಂತ್ ಜೈನ್ ಅವರಿಂದ ಉದ್ಘಾಟನೆಗೊಂಡು ಲೋಕಾರ್ಪಣೆ ಮಾಡಲಾಯಿತು.



ಬೆಳ್ತಂಗಡಿ ತಾಲೂಕಿನ ಹೆಸರಾಂತ ಅಂಬುಲೆನ್ಸ್ ಚಾಲಕರಾದ ಹಮೀದ್ (ಅಮ್ಮಿ) ಆರೋಗ್ಯ ರಕ್ಷಾ ಅಂಬುಲೆನ್ಸ್ ಬೆಳ್ತಂಗಡಿ.ಇಬ್ರಾಹಿಂ ಗುರುವಾಯನಕೆರೆ ಹಾಗೂ ಅಭಿಲಾಶ್ ಖುಷಿ ಅಂಬುಲೆನ್ಸ್ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು.
ಎಕ್ಸೆಲ್ ಕಾಲೇಜ್ ಚೇರ್ ಮನ್ ಸುಮಂತ್ ಮತ್ತು ಕುಮಾರ್, ತಾಲೂಕು ಎಸ್.ಡಿ.ಪಿ.ಐ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಕುವೆಟ್ಟು ಗ್ರಾ. ಪಂ ಸದಸ್ಯ ಮಸ್ತಾಪ್ ಜೆ.ಕೆ, ಕುವೆಟ್ಟು ಪಂಚಾಯತ್ ಪಿ.ಡಿ.ಓ ಇಮ್ತಿಯಾಜ್, ಪಿಸಿಸಿಯನ್ ವನೋರ ಲೋಬೋ, ಗುರುವಾಯನಕೆರೆ ಆಡಳಿತ ಸಮಿತಿ ಅಧ್ಯಕ್ಷ ಯಾಕುಬ್ ಮುಸ್ಲಿಯಾರ್, ಮಡಂತ್ಯಾರು ನೂರುಲ್ ಹುದ ಮಸೀದಿ ಅಧ್ಯಕ್ಷ ಜಿ.ನಜೀರ್ ಹಾಜಿ, ಗುರುವಾಯನಕೆರೆ ವಿಕಾಸ್ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎಲೋಷಿಯಸ್ ಡಿ ಸೋಜಾ, ವಿಕಾಸ್ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿತಾ ಫೆರ್ನಾoಡಿಸ್, ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಉದಯ್ ಕುಮಾರ್, ಕಾಸಿಂ ಬದ್ಯಾರ್ ಉಪಸ್ತಿತರಿದ್ದರು.








