






ಕುಕ್ಕೇಡಿ : ಅಂಬೇಡ್ಕರ್ ಭವನದ ನವೀಕೃತ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕಿನ ಗಡಿ ಪ್ರದೇಶವಾದ ಕುಕ್ಕೇಡಿ ಗ್ರಾಮದ ಬಹುಕಾಲದ ಬೇಡಿಕೆಯಾದ ಕಾಜಲದ ಕುಡ್ಪೋಲೊಕ್ಕು ಎಂಬಲ್ಲಿಗೆ ಕಾಲು ಸಂಕ ರಚನೆಗೆ 25ಲಕ್ಷ ವಿಶೇಷ ಅನುದಾನವನ್ನು ಓದಗಿಸುವಲ್ಲಿ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರಿಗೆ ಕಾಜಲದ ಕುಡ್ಪೋಲೊಕ್ಕು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.


ಕುಕ್ಕೇಡಿ ಗ್ರಾಮದ ಪಲಾನುಭವಿಗಳಾದ ಡೊಂಬಯ್ಯ ಪೂಜಾರಿ ಕಾಜಾಲ,ನಾಣ್ಯಪ್ಪ ಪೂಜಾರಿ,ದುಗ್ಗಪ್ಪ ಪೂಜಾರಿ ಕುಡ್ಪೋಲೊಕ್ಕು, ಕರುಣಾಕರ ಕಾಜಲ, ಕುಕ್ಕೇಡಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪದ್ಮನಾಭ ಬರಮೇಲು,ವಿಠಲ ಪೂಜಾರಿ ಬುಳೆಕ್ಕಾರ, ಸಂತೋಷ್ ಪೂಜಾರಿ ಮಂಜೊಲೋಕ್ಕು, ಡೇನಿಸ್ ಡಿಸೋಜಾ ಡೇನಿಸ್ ಗಲ್ಬಾವ್ ಆನಂದ ಪೂಜಾರಿ ಕುಡ್ಪೋಲೊಕ್ಕು ಮತ್ತು ಊರಿನ ಮುಖಂಡರು ಉಪಸ್ತಿತರಿದ್ದರು.









