







ಬೆಳ್ತಂಗಡಿ: ಶ್ರೀ ವಿನಾಯಕ ರೈಸ್ ಇಂಡಸ್ಟ್ರೀಸ್ ನ ಕೈಗಾರಿಕೆ ಘಟಕದಲ್ಲಿ ಜ.27ರಂದು ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಮಾದಕ ವಸ್ತು ಸೇವಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಹಾಗೂ ಮಾದಕ ವಸ್ತು ಸೇವನೆಯನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ದಕ ವಿಭಾಗ 1 ಮಂಗಳೂರಿನ ಕಾರ್ಮಿಕ ಅಧಿಕಾರಿ ಕುಮಾರ್ ಬಿ ಅವರ ಸಹಯೋಗದೊಂದಿಗೆ ಕಾರ್ಯಕರ್ಮವನ್ನು ಏರ್ಪಡಿಸಲಾಯಿತು.



ಕುಮಾರ್ ಬಿ ಅವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರವಾಗಿ ತಿಳಿಸಿದರು. ಆರೋಗ್ಯ ಸೇವೆ ವಿಭಾಗದಿಂದ ಅರವಿಂದ ಅವರು ದುಶ್ಚಟಗಳಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವದಲ್ಲಿ ಸಂಸ್ಥೆಯ ಮಾಲಕರಾದ ಎ. ಚಂದ್ರಕಾಂತ್ ಕಾಮತ್ ಮತ್ತು ಎ. ಶ್ರೀಕಾಂತ ಕಾಮತ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೈಗಾರಿಕೆ ಘಟಕದ ಮಾಲಕರಾದ ಎ. ಶ್ರೀಕಾಂತ ಕಾಮತ್ ರವರು ಬಂದಿರುವ ಸಂಪನ್ಮೂಲ ವ್ಯಕ್ತಿಯವರನ್ನು ಸ್ವಾಗತಿಸಿದರು. ಬೆಳ್ತಂಗಡಿ ಕಾರ್ಮಿಕ ನಿರೀಕ್ಷಕರು ಧನ್ಯವಾದ ಅರ್ಪಿಸಿದರು.









